ಉಡುಪಿ: ಈ ಬಾರಿ ಶ್ರೇಷ್ಠ ಯಕ್ಷವಿದ್ಯಾ ಮಾನ್ಯ ಪ್ರಶಸ್ತಿಗೆ ತೆಂಕುತಿಟ್ಟಿನ ಖ್ಯಾತ ಕಲಾವಿದ ಕೆ. ಗೋವಿಂದ ಭಟ್ ಅವರು ಭಾಜನರಾಗಿದ್ದಾರೆ.
ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾದೀಶ ತೀರ್ಥ ಶ್ರೀಪಾದರು ತಮ್ಮ ಗುರುವಿನ ಹೆಸರಿನಲ್ಲಿ ಅನುಗ್ರಹ ಪೂರ್ವಕವಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಇದೇ ಬರುವ ಎಪ್ರಿಲ್ ಹತ್ತರಂದು ಪಲಿಮಾರಿನಲ್ಲಿ ಶ್ರೀ ವಿದ್ಯಾಮಾನ್ಯ ತೀರ್ಥರ ಆರಾಧನ ಮಹೋತ್ಸವ ಜರುಗಲಿದೆ. ಈ ಸಂದರ್ಭ ಫಲಕ, ಐವತ್ತು ಸಾವಿರ ರೂ. ನಿಧಿಯೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

