ಮೇಷ: ಹಣದ ಪರಿಸ್ಥಿತಿ ಇಂದು ಸುಧಾರಿಸುತ್ತದೆ. ಸಂಗಾತಿಯ ಮೇಲೆ ಭಾವನಾತ್ಮಕ ಬೆದರಿಕೆ ಹಾಕಬೇಡಿ. ಸಂಗಾತಿಯ ಒರಟು ವರ್ತನೆ ನಿಮ್ಮನ್ನು ಒತ್ತಡಕ್ಕೆ ಸಿಲುಕಿಸಬಹುದು.
ವೃಷಭ: ಆಕಾಂಕ್ಷೆಗಳನ್ನು ಪರಿಶೀಲಿಸಿ, ಯೋಗದ ಲಾಭ ಪಡೆದುಕೊಳ್ಳಿ. ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಬೇಡಿ.
ಮಿಥುನ: ನೀವು ಹಣ ಸಂಗ್ರಹಿಸಿದ್ದರೆ ಮಾತ್ರ ಅದು ನಿಮ್ಮ ಉಪಯೋಗಕ್ಕೆ ಬರುತ್ತದೆ. ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ಹೆತ್ತವರು ನಿಮ್ಮ ಸಂಗಾತಿಗೆ ವಿಶೇಷವಾಗಿ ಆಶೀರ್ವಾದ ನೀಡುತ್ತಾರೆ.
ಕರ್ಕಾಟಕ: ನಿಮ್ಮ ಆಕರ್ಷಕ ವರ್ತನೆ ಗಮನ ಸೆಳೆಯುತ್ತದೆ. ನಿಮ್ಮ ಮಾತು ಅರ್ಥೈಸಲು ಪ್ರಯತ್ನಿಸಿ. ಇಂದು ನಿಮ್ಮ ಮನಸ್ಸು ಶಾಂತವಾಗಿರುತ್ತದೆ.
ಸಿಂಹ: ಆರೋಗ್ಯ ಚೆನ್ನಾಗಿರುತ್ತದೆ. ಹಣ ಖರ್ಚಾಗುತ್ತಿರುವುದರ ಬಗ್ಗೆ ಎಚ್ಚರವಿರಲಿ. ಪ್ರಿಯತಮೆ ನಿಮ್ಮ ಸಜೀವ ದೇವತೆಯಾಗಲಿದ್ದಾಳೆ.
ಕನ್ಯಾ: ನಿಮಗೆ ತಿಳಿದ ಜನರ ಮೂಲಕ ಆದಾಯದ ಮೂಲ ತಿಳಿಯುತ್ತದೆ. ಸಾಕಷ್ಟು ಸಮಯ ಒಂಟಿಯಾಗಿ ಕಳೆಯುತ್ತೀರಿ. ಕಳೆದುಕೊಂಡ ಹಳೆಯ ವಸ್ತು ಇಂದು ಸಿಗಬಹುದು.
ತುಲಾ: ಪ್ರಯಾಣದಲ್ಲಿ ಅಮೂಲ್ಯ ವಸ್ತುಗಳ ಮೇಲೆ ಎಚ್ಚರವಿರಲಿ. ಉದ್ಯೋಗಕ್ಕಾಗಿ ಕೈಗೊಂಡ ಪ್ರಯಾಣ ಫಲಪ್ರದ. ಯಾವುದಕ್ಕೂ ಪೋಷಕರ ಅನುಮತಿ ಪಡೆದುಕೊಳ್ಳಿ.
ವೃಶ್ಚಿಕ: ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಯೋಚಿಸಿ. ಇಂದು ಸಾಲಗಾರನು ನಿಮ್ಮ ಮನೆ ಬಾಗಿಲಿಗೆ ಬರಬಹುದು. ಪ್ರಯಾಣದಲ್ಲಿ ಪ್ರಣಯದ ಸಂಪರ್ಕವಾಗುವ ಸಾಧ್ಯತೆ ಇದೆ.
ಧನಸ್ಸು: ಕೊಲೆಸ್ಟ್ರಾಲ್ ಇರುವ ಆಹಾರ ಸೇವಿಸಬೇಡಿ. ನಿಮ್ಮ ಪ್ರೇಮಿ ಇಂದು ಕೋಪದಲ್ಲಿರುತ್ತಾರೆ. ಇಬ್ಬರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯ ಬರುತ್ತದೆ.
ಮಕರ: ಕ್ರೀಡೆಯಲ್ಲಿ ಆಟವಾಡಿ ಚೈತನ್ಯ ಗಳಿಸುತ್ತೀರಿ. ಕೆಲಸದಲ್ಲಿ ಬದ್ಧತೆಯಿದ್ದರೆ ಲಾಭ ಗಳಿಸುತ್ತೀರಿ. ನಿಮ್ಮ ಸಂಗಾತಿಯ ಮೇಲೆ ಮುನಿಸಿಕೊಳ್ಳಬಹುದು.
ಕುಂಭ: ವಿವಾಹಿತರಾಗಿದ್ದರೆ ಆರೋಗ್ಯದ ಮೇಲೆ ಗಮನ ಹರಿಸಿ. ನಿಮ್ಮ ಮನಸ್ಥತಿ ಹಾಳಾಗಬಹುದು. ಸ್ನೇಹಿತರು ನಿಮ್ಮನ್ನು ವಿಶ್ರಾಂತಿ ಪಡೆಯಲು ಬಿಡುವುದಿಲ್ಲ.
ಮೀನ: ನಿಮ್ಮ ಸಂಗಾತಿಯೊಡನೆ ಉತ್ತಮ ಬಾಂಧವ್ಯದಲ್ಲಿರಿ. ಮನೆಯಲ್ಲಿ ಹಳೆಯ ವಸ್ತು ನಿಮಗೆ ಸಿಗಬಹುದು. ಸಾಕಷ್ಟು ಸಮಯ ಒಂಟಿಯಾಗಿ ಇರುತ್ತೀರಿ.


