ಅಜೆಕಾರು: ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಫೇಲ್ ಆಗಿದಕ್ಕೆ ಮನನೊಂದು ವಿದ್ಯಾರ್ಥಿಯೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳದ ಎಳ್ಳಾರೆಯಲ್ಲಿ ನಡೆದಿದೆ.
ಎಳ್ಳಾರೆ ಗ್ರಾಮದ ಮಂಜರಬೆಟ್ಟಿನ ರಮೇಶ್ ಅವರ ಮಗ ಹದಿನೇಳು ವರ್ಷದ ತೇಜಸ್ ಆತ್ಮಹತ್ಯೆಗೆ ಶರಣಾದ ದುರ್ದೈವಿಯಾಗಿದ್ದಾನೆ. ಈತ ೨೦೨೩ರ ಮಾರ್ಚ್ ನಲ್ಲಿ ನಡೆದಿದ್ದ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಫೇಲ್ ಆಗಿದ್ದ. ನಂತರ ಅಜೆಕಾರಿನ ಟ್ಯೂಷನ್ ಸೆಂಟರ್ ನಲ್ಲಿ ಕೋಚಿಂಗ್ ಪಡೆದು ಕಳೆದ ವರ್ಷ ಮಾರ್ಚ್ ನಲ್ಲಿ ಮರುಪರೀಕ್ಷೆ ಬರೆದಿದ್ದ. ಅದರಲ್ಲೂ ಫೇಲ್ ಆಗಿದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆದರೆ ಪರೀಕ್ಷೆ ರಿಸಲ್ಟ್ ಬಂದು ಒಂದು ವರ್ಷದ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ. ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

