ಚಿಕ್ಕಗಾತ್ರದ ಒಣದ್ರಾಕ್ಷಿಯಲ್ಲಿ ಕೂಡಾ ಆರೋಗ್ಯಕ್ಕೆ ಪ್ರಯೋಜನವಾಗುವ ಅನೇಕ ಅಂಶಗಳಿವೆ. ಇದನ್ನು ನೆನಿಸಿ ತಿನ್ನಬಹುದು ಅಥವಾ ಒಣಗಿಸಿ ಕೂಡಾ ಸೇವಿಸಬಹುದು. ಖನಿಜಗಳು, ವಿಟಮಿನ್ ಗಳು ಇದರಲ್ಲಿ ಹೇರಳವಾಗಿದ್ದು ಆರೋಗ್ಯವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.
ಒಣದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ ಬೆಳಿಗ್ಗೆ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆಯನ್ನು ತಡೆಗಟ್ಟಿ ಕರುಳಿನ ಆರೋಗ್ಯವನ್ನು ಇದು ಕಾಪಾಡುತ್ತದೆ.
ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾಗುವಲ್ಲಿ ಕೂಡಾ ಒಣದ್ರಾಕ್ಷಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ. ಮಹಿಳೆಯರಿಗಂತೂ ಇದು ದೇಹಕ್ಕೆ ಅತ್ಯಂತ ಉಪಯೋಗಕಾರಿ.
ಕ್ಯಾನ್ಸರ್ ಮತ್ತು ದೀರ್ಘಕಾಲೀನ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.


