ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಕುಂದಾಪುರ ಘಟಕದ ವತಿಯಿಂದ ಶ್ರೀ ಮಹಿಷಾಸುರ ಮರ್ಧಿನಿ ದೇವಸ್ಥಾನದ ಶೀಲಾಧ್ವಜ ಪೀಠಕ್ಕೆ ಹಿತ್ತಾಳೆ ಕವಚ ಹಾಗೂ ಶಿಲಾಕಂಭಕ್ಕೆ ತಾಮ್ರದ ಹೊದಿಕೆ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ.
ಇದರ ಪ್ರಯುಕ್ತ ನಾಳೆ ರಾತ್ರಿ ಮತ್ತು ಎಪ್ರಿಲ್ ಮೂರರ ಗುರುವಾರದಂದು ಬೆಳಿಗ್ಗೆ ಧ್ವಜಪೀಠ ಪುನರ್ ಪ್ರತಿಷ್ಟೆ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಭಕ್ತಾಭಿಮಾನಿಗಳು ಈ ಪೂಜೆಯಲ್ಲಿ ಪಾಲ್ಗೊಂಡು ಶ್ರೀದೇವಿ ಕುಲಮಾತೆಯ ಗಂಧ ಪ್ರಸಾದ ಸ್ವೀಕರಿಸಿ ಶ್ರೀಮಾತೆಯ ಆಶೀರ್ವಾದವನ್ನು ಪಡೆದುಕೊಳ್ಳಬೇಕಾಗಿ ಕುಂದಾಪುರ ಘಟಕ, ಮೊಗವೀರ ಯುವ ಸಂಘಟನೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.

ಇನ್ನು ಶ್ರೀ ಕ್ಷೇತ್ರದಲ್ಲಿ ಎಪ್ರಿಲ್ ಹತ್ತರಿಂದ ಹದಿನಾಲ್ಕರವರೆಗೆ ಬ್ರಹ್ಮರಥೋತ್ಸವ ನಡೆಯಲಿದೆ. ಈ ಪ್ರಯುಕ್ತ ನಾಲ್ಕು ದಿನ ನಿರಂತರವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವ ನಡೆಯಲಿದೆ. ಹೆಸರಾಂತ ಭಜನಾ ತಂಡಗಳಿಂದ ಕುಣಿತ ಭಜನೆ, ಪ್ರಸಿದ್ಧ ಗಾಯಕರಿಂದ ಸಂಗೀತ ಕಾರ್ಯಕ್ರಮ, ಭರತನಾಟ್ಯ ಸೇರಿದಂತೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ದೇಗುಲದ ಆಡಳಿತ ಮಂಡಳಿ ಸರ್ವ ಭಕ್ತಾಭಿಮಾನಿಗಳಿಗೆ ಆದರದ ಸ್ವಾಗತ ಕೋರಿದೆ.


