ಕಾರ್ಕಳ: ಹಾಡಿ ಪ್ರದೇಶದಲ್ಲಿ ಅಂದರ್-ಬಾಹರ್ ಜುಗಾರಿ ಆಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆದ ಘಟನೆ ಕಾರ್ಕಳ ಮುಡಾರು ಗ್ರಾಮದ ಹುಕ್ರಟ್ಟೆಯ ದೇವಸ ಮನೆ ಬಳಿ ನಡೆದಿದೆ.
ಅಕ್ಷಯ್ ಎಂಬಾತ ಬಂಧಿತ ಆರೋಪಿ. ಯಶೋಧರ, ರತ್ನಾಕರ ಹಾಗೂ ಮತ್ತಿತ್ತರರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಟಕ್ಕೆ ಬಳಸಿದ್ದ ಆರುನೂರು ರೂಪಾಯಿ, ಇಸ್ಪೀಟ್ ಎಲೆಗಳು, ಪ್ಲಾಸ್ಟಿಕ್ ಟರ್ಪಾಲ್ ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


