ಟೀಂ ಇಂಡಿಯಾದ ಸ್ಟಾರ್ ಆಟಗಾರ, ಆರ್ ಸಿಬಿ ಫ್ಯಾನ್ಸ್ ಗಳ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಅವರು ಇಂದು ಪ್ರಮುಖವಾದ ವಿಚಾರವೊಂದನ್ನು ಘೋಷಣೆ ಮಾಡಿದ್ದಾರೆ. ಇದರಿಂದ ಅವರ ಅಭಿಮಾನಿಗಳಿಗಂತೂ ಫುಲ್ ಖುಷ್ ಆಗಿದೆ.
ಇವರು ೨೦೨೭ರ ಏಕದಿನ ವಿಶ್ವಕಪ್ ನಲ್ಲಿ ಆಡುವ ವಿಚಾರವಾಗಿ ಮತ್ತು ತಮ್ಮ ವೃತ್ತಿಜೀವನದಲ್ಲಿ ಮುಂದಿನ ಗುರಿ ಏನು ಎಂಬುದರ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದು ಇವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ನಿಮ್ಮ ಮುಂದಿನ ಗುರಿ ಏನು..? ಎಂಬ ಪ್ರಶ್ನೆಗೆ ಖಡಕ್ಕಾಗಿ ಉತ್ತರಿಸಿದ ವಿರಾಟ್ ಮುಂದಿನ ಏಕದಿನ ವಿಶ್ವಕಪ್ ಗೆಲ್ಲಲು ನಾನು ಬಹಳ ಉತ್ಸಾಹದಿಂದ ಮತ್ತು ಕಾತುರದಿಂದ ಕಾಯುತ್ತಿದ್ದೇನೆ ಎಂದು ಹೇಳಿದರು. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮುಂದಿನ ಏಕದಿನ ವಿಶ್ವಕಪ್ ಗೆ ಅವರು ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ.


