ಕೊಡಗು: ಕೊಡಗಿನಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಕೇರಳದ ಕಣ್ಣೂರಿನಿಂದ ಮಡಿಕೇರಿಗೆ ಬರುತ್ತಿದ್ದ ಖಾಸಗಿ ಕ್ಲಾಸಿಕ್ ಬಸ್ ಮತ್ತು ಲಾರಿ ಮಧ್ಯೆ ಅಪಘಾತವೊಂದು ಸಂಭವಿಸಿದೆ. ಕೊಡಗಿನ ಇರಿಟಿ ಸಮೀಪದ ಉಳಿಯಲ್ ಬಳಿ ಈ ದುರಂತ ನಡೆದಿದೆ.
ನಡೆದ ಅಪಘಾತದಲ್ಲಿ ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಣ್ಣೂರು, ಮಟನೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


