ಕರಾವಳಿ ಮೂಲದ ಹೆಮ್ಮೆಯ ನಟ, ಬಿಗ್ಬಾಸ್ ಕನ್ನಡ ಏಳರ ಸ್ಪರ್ಧಿ ಶೈನ್ ಶೆಟ್ಟಿ ಅವರಿಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ. ಕಿರುತೆರೆ, ಸಿನಿಮಾ ಇವೆಲ್ಲದರ ಜೊತೆಗೆ ಒಬ್ಬ ನಟನಾಗಿ ಮಾತ್ರವಲ್ಲದೆ ಹೊಟೇಲ್ ಉದ್ಯಮದಲ್ಲಿ ಕೂಡಾ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದೀಗ ಅವರು ತಮಗೆ ಬದುಕು ಕಟ್ಟಿಕೊಟ್ಟ ರೆಸ್ಟೋರೆಂಟ್ ಗೆ ಗುಡ್ ಬಾಯ್ ಹೇಳಿದ್ದಾರೆ. ಈ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಜೀವನದ ಕೆಲವೊಂದು ಪ್ರಯಾಣ ನಮ್ಮ ಅಸ್ತಿತ್ವವನ್ನು ತೋರಿಸಿ ನಮ್ಮ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತೆ ನನ್ನ ಲೈಫ್ ಆ ರೀತಿಯ ಪಾತ್ರ ವಹಿಸಿದ್ದು ಗಲ್ಲಿ ಕಿಚನ್. ಜೀವನ ಸಾಗಿಸೋಕೆ ಅಂತ ಶುರು ಮಾಡಿದ ಒಂದು ಪುಟ್ಟ ದೋಸೆ ಕ್ಯಾಂಪ್ ನೀವೆಲ್ಲ ಇಷ್ಟಪಟ್ಟು ಕೊಂಡಾಡಿ ಎರಡು ಬ್ರಾಂಚ್ಗಳ ಹೋಟೆಲ್ ಮಟ್ಟಕ್ಕೆ ಪ್ರೀತಿಯಿಂದ ಬೆಳೆಸಿದ್ರಿ. ಆ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರೃಣೆ. ಇನ್ಮುಂದೆ ಆ ಕನಸಿನ ಜೊತೆಗೆ ಮತ್ತೋರ್ವ ಯುವ ಆಶಾವಾದಿ ಸಾಗಲಿದ್ದಾನೆ. ಅವನನ್ನೂ ಹರಸಿ, ಆಶೀರ್ವದಿಸಿ ಎಂದು ಶೈನ್ ಪತ್ರ ಬರೆದಿದ್ದಾರೆ.
ಚಿತ್ರರಂಗದಲ್ಲಿ ಫೇಲ್ಯೂರ್ ಕಂಡಾಗ ಇವರು ಗಲ್ಲಿ ಕಿಚನ್ ಫುಡ್ ಟ್ರಕ್ ಒಂದನ್ನು ಆರಂಭಿಸಿದ್ದರು. ಆ ನಂತರ ಶೈನ್ ಬಿಗ್ ಬಾಸ್ಗೆ ಹೋದಾಗ ಅವರ ತಾಯಿ ಇದನ್ನು ಮುಂದುವರೆಸಿಕೊಂಡು ಹೋದರು. ಶೋ ಮುಗಿದ್ಮೇಲೆ ಇನ್ನೆರಡು ಬ್ರ್ಯಾಂಚ್ ಅನ್ನು ಆರಂಭಿಸಿದರು. ಇದೀಗ ಬದುಕು ಕೊಟ್ಟ ಹೋಟೆಲ್ ಉದ್ಯಮಕ್ಕೆ ಅವರು ಗುಡ್ ಬೈ ಹೇಳಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ಗೆ ಬೇಸರವಾಗಿದೆ.

