ಈ ಆಧುನಿಕ ಜಗತ್ತಿನಲ್ಲಿ ಜನರು ಆರೋಗ್ಯದ ಬಗ್ಗೆ ವಿಶೇಷವಾದ ಕಾಳಜಿ ವಹಿಸುತ್ತಾರೆ. ಬದಲಾದ ಜೀವನ ಶೈಲಿ, ಹವಾಮಾನ, ಆಧುನಿಕತೆಯಿಂದ ಮನುಷ್ಯನ ಆರೋಗ್ಯದಲ್ಲೂ ಏರುಪೇರುಗಳಾಗುತ್ತಿರುತ್ತದೆ. ಆದ್ದರಿಂದ ಆರೋಗ್ಯಕ್ಕೆ ಪೂರಕವಾದ ಆಹಾರವನ್ನು ತೆಗೆದುಕೊಳ್ಳುವುದು ಅತೀ ಅವಶ್ಯಕ. ಅತ್ಯಂತ ಕಡಿಮೆ ಬೆಲೆಯಲ್ಲಿ ಆರೋಗ್ಯಕ್ಕೆ ಎಲ್ಲಾ ರೀತಿಯ ಲಾಭಗಳನ್ನು ನೀಡುವ ಬೂದು ಕುಂಬಳಕಾಯಿ ಬಗ್ಗೆ ನೀವು ಕೇಳಿರಬಹುದು.
ಅನೇಕರು ಇತ್ತೀಚೆಗೆ ಡಯಟ್, ವ್ಯಾಯಾಮ, ಜಿಮ್ ಗೆ ಹೋಗುವುದರ ಮೂಲಕ ಅರೋಗ್ಯ ಮತ್ತು ಫಿಟ್ನೆಸ್ ಗೆ ಹೆಚ್ಚು ಒತ್ತು ನೀಡುತ್ತಾರೆ. ಅಂಥವರು ಈ ಬೂದು ಕುಂಬಳಕಾಯಿ ಜ್ಯೂಸನ್ನು ರೆಗ್ಯುಲರ್ ಆಗಿ ಸೇವಿಸುತ್ತಾರೆ.
ಕಡಿಮೆ ಕ್ಯಾಲೋರಿ ಹೊಂದಿರುವ ತರಕಾರಿ ಇದಾಗಿದ್ದು ಇದರಲ್ಲಿ ಫೈಬರ್ ಅಂಶ ಕೂಡಾ ಹೆಚ್ಚಿದೆ. ತೂಕ ಇಳಿಸಿಕೊಳ್ಳಲು ಕೂಡಾ ಇದು ಉತ್ತಮ ಆಯ್ಕೆ. ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗುತ್ತದೆ.
ಹೊಟ್ಟೆಯುಬ್ಬರವನ್ನು ಕಡಿಮೆ ಮಾಡುವುದರ ಜೊತೆಗೆ ಆರೋಗ್ಯಕರ ಜೀರ್ಣಕ್ರಿಯೆಗೆ ಇದು ಸಹಕಾರಿ. ಇದು ದೇಹದಿಂದ ವಿಷ ಅಂಶಗಳನ್ನು ಕೂಡಾ ಹೊರಹಾಕುತ್ತದೆ. ಮಿತವಾದ ಪ್ರಮಾಣದಲ್ಲಿ ಇದನ್ನು ಸೇವಿಸುವುದು ಒಳ್ಳೆಯದು.

