ಇತ್ತೀಚಿನ ದಿನಗಳಲ್ಲಿ ಮೊಬೈಲ್ ನಲ್ಲಿ ಯಾರ ಸ್ಟೇಟಸ್ ನೋಡಿದ್ರೂ ಕೂಡಾ ಘಿಬ್ಲಿ ಟ್ರೆಂಡಿದ್ದೇ ಹವಾ. ವೈಯಕ್ತಿಕ ಫೋಟೋಗಳನ್ನು, ಫ್ರೆಂಡ್ಸ್ ಜೊತೆಗಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತೇವೆ. ಆದರೆ ಈ ಟೆಕ್ನಾಲಜಿ ಎಷ್ಟು ಅಪಾಯಕಾರಿ ಎಂಬುದರ ಬಗ್ಗೆ ತಿಳಿದುಕೊಳ್ಳುವ ಗೋಜಿಗೇ ನಾವು ಹೋಗುವುದಿಲ್ಲ.
ಪ್ರೈವೆಸಿ ಕಾಪಾಡಿಕೊಳ್ಳುವ ಕಾರಣಕ್ಕಾಗಿ ಫೋಟೋ ಜನರೇಟ್ ಮಾಡಲು ವಿಶ್ವಾಸಾರ್ಹ ಎಐ ಆ್ಯಪ್ ಗಳನ್ನು ಮಾತ್ರವೇ ಬಳಸಿ ಎಂದು ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಜಾಗರೂಕತೆಯಿಂದ ಇರುವುದು ಒಳ್ಳೆಯದು.
ಎಐ ಆಧಾರಿತ ಘಿಬ್ಲಿ ಟ್ರೆಂಡ್ ನಿಮ್ಮ ಖಾಸಗಿತನಕ್ಕೆ ಧಕ್ಕೆ ತರುತ್ತದೆ. ಆದ್ದರಿಂದ ವೈಯಕ್ತಿಕ ಫೋಟೋಗಳನ್ನು ಇಂತಹ ಆ್ಯಪ್ ಗಳಲ್ಲಿ ಅಪ್ಲೋಡ್ ಮಾಡುವ ಮೊದಲು ಎಚ್ಚರಿಕೆ ವಹಿಸೋದು ತುಂಬಾ ಅಗತ್ಯ. ಘಿಬ್ಲಿ ಟ್ರೆಂಡ್ ಅತಿರೇಕಕ್ಕೆ ಹೋಗುತ್ತಿದ್ದು ಗೌಪ್ಯತೆ ಹರಿವಿನ ಬಗ್ಗೆ ಪೊಲೀಸರು ಕಳವಳ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕೂಡಾ ಈ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವಂತೆ ಕ್ರಮಗಳನ್ನು ಅನುಸರಿಸಬೇಕಾಗಿದೆ.

