ದಕ್ಷಿಣ ಕನ್ನಡ: ಬೆವರು ಸುರಿಸಿ ಶ್ರಮ ಹಾಕಿ ರೈತ ಬೆಳೆಯುವ ಬೆಳೆಗೆ ತಕ್ಕ ಪ್ರತಿಫಲ ಬಂದರೆ ಅದೇ ಕೃಷಿಕನಿಗೆ ಬೆಲೆ ಕಟ್ಟಲಾಗದ ಸಂತೋಷ. ಇದೀಗ ಕೃಷಿ ಮಾರುಕಟ್ಟೆಯಲ್ಲಿ ಅಡಿಕೆ ಮತ್ತು ಕಾಳು ಮೆಣಸಿನ ಬೆಲೆ ಏರಿಕೆಯಾಗಿದ್ದು ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿದೆ.
ಕಾಳುಮೆಣಸಿನ ಬೆಲೆ ಕೆಜಿಗೆ ಏಳುನೂರು ರೂಪಾಯಿ ಗಡಿ ದಾಟಿ ಬಂದಿರೋದು ರೈತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಕಳೆದ ಒಂದು ವಾರಕ್ಕೆ ಹೋಲಿಸಿದರೆ ಕಾಳುಮೆಣಸಿನ ದರ ಇಪ್ಪತ್ತು ರೂಪಾಯಿ ಹೆಚ್ಚಳ ಕಂಡಿದೆ. ಹೊಸ ಅಡಿಕೆಗೂ ಕೆಜಿಗೆ ನಾಲ್ನೂರ ಐವತ್ತು ರೂಪಾಯಿ ಹೆಚ್ಚಾಗಿದೆ. ಇದರಿಂದ ಕೃಷಿಕರಲ್ಲಿ ಇನ್ನೂ ಭರವಸೆ ಹೆಚ್ಚಾಗಿದೆ.
ಅಡಿಕೆ ಮತ್ತು ಕಾಳುಮೆಣಸಿನ ಬೆಲೆಯ ಜೊತೆಗೆ ತೆಂಗಿನಕಾಯಿ ಬೆಲೆಯೂ ಹೆಚ್ಚಾಗಿದೆ. ಈ ಎಲ್ಲಾ ಬೆಳವಣಿಗೆಗಳು ಚೈತನ್ಯ ಮೂಡಿಸಿದೆ. ಆದರೆ ಗ್ರಾಹಕರಿಗೆ ಮಾತ್ರ ಸ್ವಲ್ಪ ಮಟ್ಟಿನ ತಲೆನೋವು ಹೆಚ್ಚಾಗಿದೆ.

