ತಮಿಳುನಾಡು: ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಸರತ್ತು ತೀವ್ರಗೊಳ್ಳುತ್ತಿರುವಾಗಲೇ ಇದೀಗ ಸಿಂಗಂ ಅಣ್ಣಾಮಲೈ ಅವರು ರಾಜೀನಾಮೆ ನೀಡುವುದರ ಮುಖೇನ ಹೊಸ ಸಂಚಲನವನ್ನು ಸೃಷ್ಟಿಸಿದ್ದಾರೆ.
ರಾಜಕೀಯದ ರೇಸ್ ನಿಂದ ಹಿಂದೆ ಸರಿಯಲು ನಿರ್ಧರಿಸಿದ ಅಣ್ಣಾಮಲೈ ಅವರು ತಮ್ಮ ರಾಜೀನಾಮೆಯನ್ನು ದೃಢಪಡಿಸಿದ್ದಾರೆ. ಅಲ್ಲದೆ ಪಕ್ಷ ಒಗ್ಗಟ್ಟಾಗಿ ಮತ್ತೋರ್ವ ನಾಯಕನನ್ನು ಆಯ್ಕೆ ಮಾಡಲಿದೆ ಎಂಬ ಅಚ್ಚರಿ ಹೇಳಿಕೆಯನ್ನು ಕೂಡಾ ನೀಡಿದ್ದಾರೆ.
ತಮಿಳುನಾಡು ಬಿಜೆಪಿಯಿಂದ ಕೋಪಗೊಂಡು ಹೊರ ನಡೆದಿದ್ದ ಎಐಎಡಿಎಂಕೆ ಪಕ್ಷ ಮತ್ತೆ ಮೈತ್ರಿಗೆ ಮುಂದಾಗಿದೆ. ಇದರ ಹಿನ್ನೆಲೆ ಷರತ್ತಿನ ಕಾರಣದಿಂದಾಗಿ ಅಣ್ಣಾಮಲೈ ಅವರ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ಹೇಳಲಾಗುತ್ತಿದೆ.


