ಸಿನಿಮಾ, ಧಾರವಾಹಿ, ರಿಯಾಲಿಟಿ ಶೋ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಕೆಲವರಿಗೆ ನಟನೆ ನೋಡೋದು ಇಷ್ಟ ಆದ್ರೆ ಇನ್ನೂ ಕೆಲವರಿಗೆ ನಟನೆ ಮಾಡೋದ್ರಲ್ಲಿ ಆಸಕ್ತಿ ಇರುತ್ತೆ. ಅಂತಹ ಆಸಕ್ತಿ ನಿಮ್ಮಲ್ಲೂ ಇದ್ದರೆ ಕನ್ನಡ ಕಿರುತೆರೆ ವಾಹಿನಿ ಝೀ ಕನ್ನಡ ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡುತ್ತಿದೆ.
ಮಹಾನಟಿ ಸೀಸನ್ 1 ಈಗಾಗಲೇ ಯಶಸ್ವಿಯಾಗಿದ್ದು ತೀರ್ಪುಗಾರರಾಗಿದ್ದ ಶ್ರೀ ತರುಣ್ ಸುಧೀರ್ ಹಾಗೂ ಮಹಾನಟಿ ಪ್ರೇಮ ಅವರ ನಟನೆಯ ಪಾಠಗಳು,ಮನೋಜ್ಞ ನಟಿ ನಿಶ್ವಿಕ ಅವರ ಸ್ಫೂರ್ತಿದಾಯಕ ಮಾತುಗಳು, ಮಾಸ್ಟರ್ ಮೈಂಡ್ ಎಂದೇ ಖ್ಯಾತರಾದ ಶ್ರೀ ರಮೇಶ್ ಅರವಿಂದ್ ಅವರು ಕ್ಲಾಸ್ ಮುಖೇನ ನಟಿಯರು ಅಭಿನಯವನ್ನು ತಿದ್ದಿ ತೀಡಿಕೊಂಡು ಹೋಗಿದ್ದಾರೆ.
ಮಹಾನಟಿ ಸೀಸನ್-2 ಆಡಿಷನ್ 16 ಜಿಲ್ಲೆಗಳಲ್ಲಿ ನಡೆಯಲಿದ್ದು 18 ರಿಂದ 28 ವರುಷದ ಒಳಗಿನ ಕಲಾಸಕ್ತಿ ಇರುವ ಯುವತಿಯರು ಈ ಆಡಿಷನ್ ನಲ್ಲಿ ಭಾಗವಹಿಸಬಹುದಾಗಿದೆ. ಹಾಗೆಯೇ ಆಡಿಷನ್ ನಲ್ಲಿ ಭಾಗವಹಿಸಲು ಬರುವಾಗ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಅಡ್ರೆಸ್ ಪ್ರೂಫ್ ಕಡ್ಡಾಯವಾಗಿ ತರಬೇಕು.
ನಾಳೆ ಮೈಸೂರು ಮತ್ತು ಬೆಳಗಾವಿ, ಏಪ್ರಿಲ್ 6 ಭಾನುವಾರ ಬೆಂಗಳೂರು ಮತ್ತು ಹುಬ್ಬಳ್ಳಿ, ಏಪ್ರಿಲ್ 12 ಶನಿವಾರ ಚಿಕ್ಕಮಗಳೂರು ಮತ್ತು ಬಿಜಾಪುರ, ಏಪ್ರಿಲ್ 13 ಭಾನುವಾರ ಮಡಿಕೇರಿ ಹಾಗು ಕೊಪ್ಪಳ, ಏಪ್ರಿಲ್ 19 ಶನಿವಾರ ಮಂಗಳೂರು ಮತ್ತು ಶಿರಸಿ, ಏಪ್ರಿಲ್ 20 ಭಾನುವಾರ ಹಾಸನ ಹಾಗು ದಾವಣಗೆರೆ, ಏಪ್ರಿಲ್ 26 ಶನಿವಾರ ತುಮಕೂರು ಹಾಗು ಬಳ್ಳಾರಿ, ಏಪ್ರಿಲ್ 27 ಭಾನುವಾರ ಶಿವಮೊಗ್ಗ ಹಾಗು ಚಿತ್ರದುರ್ಗ ದಲ್ಲಿ ಆಡಿಷನ್ ನಡೆಯಲಿದೆ. ಮತ್ಯಾಕೆ ತಡ ಈ ಸುವರ್ಣವಕಾಶವನ್ನು ಸದುಪಯೋಗಪಡಿಸಿಕೊಳ್ಳಿ..

