ಬೆಳ್ತಂಗಡಿ: ಬೆಳ್ತಂಗಡಿ ತಾಲ್ಲೂಕಿನ ಶಿರ್ಲಾಲಿನ ಪಂಗ್ಲಬೆಟ್ಟು ಶ್ರೀ ಬ್ರಹ್ಮ ಮುಗೇರ್ಕಳ ಕ್ಷೇತ್ರದ ತನ್ನಿಮಾನಿಗ ಕೋಲದಲ್ಲಿ ಬಾಲಕನೋರ್ವ ಹೆಣ್ಣು ದೈವದ ಬಣ್ಣ ಹಚ್ಚುವ ಮುಖೇನ ಖ್ಯಾತಿ ಗಳಿಸಿದ್ದಾನೆ.
ಶಿರ್ಲಾಲು ಸೂಡಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿರುವ ಸಮರ್ಥ್ ಎಂಬ ಬಾಲಕ ಆತನ ತಂದೆ ಹರೀಶ ಅವರನ್ನೇ ಅನುಸರಿಸುತ್ತಾ ಇದೀಗ ತನ್ನಿಮಾನಿಗ ಹೆಣ್ಣು ದೈವದ ಬಣ್ಣ ಹಚ್ಚಿ ಕೋಲವನ್ನು ನಿರ್ವಹಿಸಿದ್ದಾನೆ.
ಖ್ಯಾತ ದೈವ ಕಲಾವಿದ ದಿ. ಮೋನು ಪಾಣಾರ ಶಿರ್ಲಾಲು ಇವರ ಮೊಮ್ಮಗ ದೈವಾರಾಧನೆಯ ಬಗ್ಗೆ ಆಸಕ್ತಿ ಹೊಂದಿರುವುದು ವಿಶೇಷ. ಸಣ್ಣ ವಯಸ್ಸಿನಲ್ಲೇ ಕಲಿತು ಕೋಲ ಕಟ್ಟಿರುವುದರ ಆತನ ಶ್ರದ್ಧಾಭಕ್ತಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

