ಕನ್ಯಾಣ: ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಾನವೆಂದರೆ ಅದು ರಕ್ತದಾನ. ಇತ್ತೀಚೆಗೆ ಅನೇಕ ಸಂಘ ಸಂಸ್ಥೆಗಳು ಈ ಮಹತ್ತರ ಸೇವೆಗಳಲ್ಲಿ ಕೈ ಜೋಡಿಸುತ್ತಿದೆ. ಯುವ ತರಣರು ಕೂಡಾ ಸ್ವಯಂಪ್ರೇರಿತರಾಗಿ ಇಂತಹ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ.
ಅಂತೆಯೇ ಕೋಡಿ ಕನ್ಯಾಣದ ಶ್ರೀರಾಮ ಗೆಳೆಯರ ಬಳಗ ಸಂಘವು ತಮ್ಮ ಮೂರನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಜಿಲ್ಲಾ ಆಸ್ಪತ್ರೆಯ ಜಂಟಿ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದೆ. ನಾಳೆ ಬೆಳಿಗ್ಗೆ ಎಂಟು ಮೂವತ್ತರಿಂದ ಕೋಡಿ ಕನ್ಯಾಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು.
ಸ್ವ ಆಸಕ್ತಿಯಿಂದ ಬಂದು ರಕ್ತದಾನ ಮಾಡಿ, ಅನೇಕ ಜೀವಗಳನ್ನು ಉಳಿಸುವಲ್ಲಿ ಕಾರಣೀಕರ್ತರಾಗೋಣ ಎಂಬ ಸದುದ್ದೇಶ ಶ್ರೀರಾಮ ಗೆಳೆಯರ ಬಳಗದ್ದು. ಹೆಚ್ಚಿನ ಮಾಹಿತಿಗೆ 9538596072 ಅಥವಾ 6363054932 ಈ ನಂಬರನ್ನು ಸಂಪರ್ಕಿಸಬಹುದು.

