ಕೋಟ: ಇನ್ಸ್ಟಾಗ್ರಾಂನಲ್ಲಿ ಬಟ್ಟೆ ಆರ್ಡರ್ ಮಾಡಿದ ಯುವತಿಗೆ ಲಕ್ಷಾಂತರ ರೂ. ವಂಚನೆ ಆದ ಘಟನೆ ಕೋಟದಲ್ಲಿ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಮುಸ್ಕನ್ ಅಪ್ಸಾರಿ ಎಂಬವರು ಇನ್ಸ್ಟಾಗ್ರಾಂನಲ್ಲಿ ಡ್ರೆಸ್ ಆರ್ಡರ್ ಮಾಡಿದ್ದರು. ನಂತರ ರಾಹುಲ್ ಶರ್ಮಾ ಎಂಬ ಹೆಸರಿನಿಂದ ಇವರಿಗೆ ವಾಟ್ಸಾಪ್ ಮೆಸೇಜ್ ಬಂದಿತ್ತು. ಅದರಂತೆ ಹಂತ ಹಂತವಾಗಿ ಆರೋಪಿಯ ಖಾತೆಗೆ ಮುಸ್ಕನ್ ಹಣ ವರ್ಗಾವಣೆ ಮಾಡಿದ್ದಾರೆ. ನಂತರ ಆರೋಪಿಗೆ ಕರೆ ಮಾಡಿದಾಗ ಅದನ್ನು ಸ್ವೀಕರಿಸದೆ ಯಾಮಾರಿಸಿದ್ದಾರೆ.
ಬಟ್ಟೆ ಆರ್ಡರ್ ನೆಪದಲ್ಲಿ ನಂಬಿಸಿ ಲಕ್ಷಾಂತರ ರೂ. ಪಂಗನಾಮ ಹಾಕಿರುವುದು ನಿಜಕ್ಕೂ ವಿಪರ್ಯಾಸ. ಈ ಬಗ್ಗೆ ತನಿಖೆ ನಡೆಯುತ್ತಿದೆ.

