ಮೇಷ: ನಿರ್ಣಯ ತೆಗೆದುಕೊಳ್ಳಲು ಮಾನಸಿಕ ಸ್ಪಷ್ಟತೆ ಅಗತ್ಯ. ಕುಟುಂಬದ ಸದಸ್ಯರೊಂದಿಗೆ ಶಾಂತ ದಿನವನ್ನು ಆಚರಿಸಿ. ಮನಸ್ಸಿನಲ್ಲಿ ಚಿಂತೆ ಬೇರೂರಲು ಅವಕಾಶ ನೀಡಬೇಡಿ.
ವೃಷಭ: ದೇಹದ ನೋವಿನಿಂದ ಬಳಲುವ ಸಾಧ್ಯತೆ ಇದೆ. ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ. ನಿಮ್ಮ ಗೆಳತಿಯ ಜೊತೆ ಅಸಭ್ಯವಾಗಿ ನಡೆದುಕೊಳ್ಳಬೇಡಿ.
ಮಿಥುನ: ಆರಾಮವಾಗಿರುವ ಭಾವನೆ ಹೊಂದಿರುತ್ತೀರಿ. ಹಳೆಯ ಸಂಪರ್ಕ ಕೆಲವು ಸಮಸ್ಯೆ ಸೃಷ್ಟಿಸಬಹುದು. ಪ್ರೀತಿಯಲ್ಲಿ ದೈರ್ಯ ಹೊಂದಿರಿ.
ಕರ್ಕಾಟಕ: ನೀವು ಭರವಸೆಯ ಮಾಯಾಜಾಲದಲ್ಲಿದ್ದೀರಿ. ಯೋಚಿಸಿ ಹಣದ ಹೂಡಿಕೆ ಮಾಡುವ ಅಗತ್ಯವಿದೆ. ನಿಮ್ಮ ನಗು ಅತ್ಯುತ್ತಮ ಔಷಧ.
ಸಿಂಹ: ಮನಸ್ಸಿನ ಸಮಸ್ಯೆ ಬಗೆಹರಿಸಲು ಸಭ್ಯತೆ ಬಳಸಿ. ನಿಮಗೆ ವಿಶ್ರಾಂತಿ ದಿನ. ಬೇರೊಬ್ಬರ ಹೃದಯ ಒಡೆಯಬೇಡಿ. ಸಾಕಷ್ಟು ಸಮಯ ಆಲೋಚಿಸುವಲ್ಲಿ ಕಳೆಯುತ್ತದೆ.
ಕನ್ಯಾ: ಹಾಸ್ಯದಿಂದ ತುಂಬಿದ ದಿನ. ಯಾವುದಾದರೂ ನಿರ್ಧಾರ ತೆಗೆದುಕೊಳ್ಳುವಾಗ ಮನೆಯವರ ಅಭಿಪ್ರಾಯ ಕೇಳಿ. ನಿಮಗೆ ಎಲ್ಲರೂ ಪ್ರೀತಿ ಮತ್ತು ಬೆಂಬಲವನ್ನು ನೀಡುತ್ತಾರೆ.
ತುಲಾ: ಮಕ್ಕಳೊಂದಿಗೆ ಆಟವಾಡುವುದು ಅದ್ಭುತ ಅನುಭವ. ಉತ್ತಮ ದಾಂಪತ್ಯ ಮನೆಯಲ್ಲಿ ಸಮೃದ್ಧಿ ತರುತ್ತದೆ. ಗಣನೀಯ ಪ್ರಮಾಣದ ಹಣ ಹೊಂದಿರುತ್ತೀರಿ.
ವೃಶ್ಚಿಕ: ಹಣಗಳಿಕೆಯ ಅವಕಾಶಗಳು ಲಾಭದಾಯಕವಾಗಿರುತ್ತದೆ. ಸಮಾಜ ಸೇವೆ ನಿಮ್ಮನ್ನು ಸೆಳೆಯುತ್ತದೆ. ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಯೋಚಿಸುತ್ತಾರೆ.
ಧನಸ್ಸು: ವಿವಾಹಿತರಾಗಿದ್ದರೆ ಮಕ್ಕಳ ಬಗ್ಗೆ ಯೋಚಿಸಿ. ಸಂಗಾತಿಯ ಮೇಲೆ ಭಾವನಾತ್ಮಕ ಬೆದರಿಕೆ ಹಾಕಬೇಡಿ. ಇತ್ತೀಚಿನ ತಂತ್ರಜ್ಞಾನಗಳ ಬಗ್ಗೆ ತಿಳಿಯಿರಿ.
ಮಕರ: ಕ್ರೀಡೆಯಲ್ಲಿ ಆಟವಾಡಿ ಚೈತನ್ಯ ಗಳಿಸುತ್ತೀರಿ. ಕೆಲಸದಲ್ಲಿ ಬದ್ಧತೆಯಿದ್ದರೆ ಲಾಭ ಗಳಿಸುತ್ತೀರಿ. ನಿಮ್ಮ ಸಂಗಾತಿಯ ಮೇಲೆ ಮುನಿಸಿಕೊಳ್ಳಬಹುದು.
ಕುಂಭ: ಆರೋಗ್ಯವಾಗಿರುತ್ತೀರಿ. ಹಣದ ನಷ್ಟವಾಗಬಹುದು. ನಿಮ್ಮ ಬಾಸ್ ನಿಮ್ಮ ಕೆಲಸ ಹೊಗಳುತ್ತಾರೆ.
ಮೀನ: ಹೊರಾಂಗಣ ಕ್ರೀಡೆ ನಿಮ್ಮನ್ನು ಸೆಳೆಯುತ್ತದೆ. ನಿಮ್ಮ ಸಂಗಾತಿ ನಿಮಗೆ ಬೆಂಬಲ ನೀಡುತ್ತಾರೆ. ನೀವಿಂದು ಅದೃಷ್ಟಶಾಲಿಯಾಗಿರುತ್ತೀರಿ.


