ಬೇಸಿಗೆಯಲ್ಲಿ ದೇಹವನ್ನು ನಾವು ಎಷ್ಟು ಹೈಡ್ರೇಟ್ ಆಗಿ ಇಡ್ತೇವೋ ಅಷ್ಟು ಒಳ್ಳೆಯದು. ಸಾಮಾನ್ಯವಾಗಿ ಸೆಕೆಗಾಲದಲ್ಲಿ ನಾವು ನಿರ್ಜಲೀಕರಣ ಸಮಸ್ಯೆಯನ್ನು ಎದುರಿಸುತ್ತೇವೆ. ಈ ಸಂದರ್ಭ ದೇಹದಲ್ಲಿ ನೀರಿನ ಸಮತೋಲನವನ್ನು ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ.
ಆಯುರ್ವೇದದಲ್ಲಿ ನೆಲ್ಲಿಕಾಯಿಯನ್ನು ನಾವು ಅಮೃತವೆಂದೇ ಪರಿಗಣಿಸುತ್ತೇವೆ. ಪೋಷಕಾಂಶಗಳು ಹೇರಳವಾಗಿರುವ ನೆಲ್ಲಿಕಾಯಿಯನ್ನು ಕೇವಲ ಹೀಗೆಯೇ ಜಗಿದು ತಿನ್ನುವುದರಿಂದ ಕೂಡಾ ದೇಹಕ್ಕೆ ಉಪಯುಕ್ತ ಅಂಶಗಳು ದೊರೆಯುತ್ತದೆ.
ನೆಲ್ಲಿಕಾಯಿ ಜ್ಯೂಸ್ ಮಾಡಿ ಅದಕ್ಕೆ ಜೇನುತುಪ್ಪ ಹಾಗೂ ಉಪ್ಪು ಬೆರೆಸಿ ಕುಡಿಯುವುದರಿಂದ ಕೂಡಾ ವಿಟಮಿನ್ಸ್ ಜೊತೆಗೆ ಸಮೃದ್ಧ ಪೋಷಕಾಂಶಗಳು ಉದರಕ್ಕೆ ಹೋಗುತ್ತದೆ. ಇದರಲ್ಲಿ ರೋಗನಿರೋಧಕ ಶಕ್ತಿ ಕೂಡಾ ಲಭಿಸುತ್ತದೆ.
ಫಿಟ್ನೆಸ್ ಟಿಪ್ಸ್ ಫಾಲೋ ಮಾಡುವವರು ಕೂಡಾ ಇದನ್ನು ಸೇವಿಸುತ್ತಾರೆ. ಇನ್ನು ನೆಲ್ಲಿಕಾಯಿ ಕೇವಲ ದೇಹಕ್ಕೆ ಮಾತ್ರವಲ್ಲದೆ ಕೇಶರಾಶಿಗೂ ಕೂಡಾ ಲಾಭ ನೀಡುತ್ತದೆ. ಉದ್ದನೆಯ ಕೇಶರಾಶಿಗೆ ಮತ್ತು ಕೂದಲಲ್ಲಿ ಹೊಳಪು ಕಾಣಲು ನೆಲ್ಲಿಕಾಯಿ ಎಣ್ಣೆಯನ್ನು ಬಳಸಿದರೆ ಸೂಕ್ತ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

