ಬೀಟ್ರೂಟ್ ಬಹುಶಃ ಅತೀ ಹೆಚ್ಚಿನವರಿಗೆ ನಾಲಗೆಗೆ ಹಿಡಿಸದ ಒಂದು ಬಗೆಯ ತರಕಾರಿ ಆಗಿದೆ. ಆದರೆ ಪೋಷಕಾಂಶಗಳಲ್ಲಿ ಶ್ರೀಮಂತವಾಗಿರುವ ಈ ತರಕಾರಿಯಿಂದ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳಿವೆ. ರಕ್ತದೊತ್ತಡವನ್ನು ಸುಧಾರಿಸಲು ಕೂಡಾ ಇದು ಸೂಪರ್ ಫುಡ್ ಆಗಿದೆ.
ಇನ್ನು ಬೆಳಗೆದ್ದು ಖಾಲಿ ಹೊಟ್ಟೆಯಲ್ಲಿ ಬೀಟ್ರೂಟ್ ಜ್ಯೂಸ್ ಮಾಡಿ ಕುಡಿಯುವುದರಿಂದ ಒಳ್ಳೆಯದು ಎಂದು ಹೇಳುತ್ತಾರೆ. ಇದರ ರಸದಲ್ಲಿರುವ ಹೆಚ್ಚಿನ ನೈಟ್ರೇಟ್ ಅಂಶವು ರಕ್ತನಾಳಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ರಕ್ತದ ಮಟ್ಟವನ್ನು ಕೂಡಾ ಹೆಚ್ಚಿಸುತ್ತದೆ. ಅಲ್ಲದೆ ಇದು ಯಕೃತ್ತಿನ ಆರೋಗ್ಯವನ್ನು ಕೂಡಾ ಬೆಂಬಲಿಸುತ್ತದೆ.
ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಅದರಲ್ಲಿರುವ ಬೀಟಾ ಲೈನ್ ಗಳು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತದೆ. ಕ್ಯಾನ್ಸರ್ ನಂತಹ ದೀರ್ಘಕಾಲದ ಖಾಯಿಲೆಗಳ ಅಪಾಯದ ಮಟ್ಟವನ್ನು ಕಡಿಮೆ ಮಾಡುತ್ತದೆ.
ಖಾಲಿ ಹೊಟ್ಟೆಯಲ್ಲಿ ಇದರ ಜ್ಯೂಸ್ ಕುಡಿಯುವುದರಿಂದ ತೂಕ ಇಳಿಕೆಗೂ ಸಹಕಾರಿ. ಏಕೆಂದರೆ ಇದರಲ್ಲಿ ಕಡಿಮೆ ಕ್ಯಾಲೋರಿ, ಹೆಚ್ಚು ಫೈಬರ್ ಅಂಶಗಳಿವೆ. ಅಲ್ಲದೆ ಬೀಟ್ರೂಟ್ ಜ್ಯೂಸ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿ. ಹೃದಯದ ಆರೋಗ್ಯವನ್ನು ಕೂಡಾ ಇದು ಬೆಂಬಲಿಸುತ್ತದೆ.

