ವಾಟ್ಸಾಪ್ ನಲ್ಲಿ ಆಗಾಗ ಏನಾದರೊಂದು ಅಪ್ಡೇಟ್ಸ್ ಬರುತ್ತಲೇ ಇರುತ್ತದೆ. ವಾಟ್ಸಾಪ್ ಬಳಕೆದಾರರಿಗೆ ಹೊಸ ಹೊಸ ಫೀಚರ್ಸ್ ಗಳನ್ನು ಕೂಡಾ ಪರಿಚಯಿಸುತ್ತಿರುತ್ತದೆ. ಆದರೆ ಇನ್ಮುಂದೆ ವಾಟ್ಸಾಪ್ ನಲ್ಲಿ ಬರುವ ಎಲ್ಲಾ ಎಲ್ಲಾ ಫೋಟೋಗಳನ್ನು ಡೌನ್ಲೋಡ್ ಮಾಡುವ ಮುನ್ನ ಹುಷಾರಾಗಿರಿ. ಇದರಿಂದ ನಿಮ್ಮ ಮೊಬೈಲ್ ಕೂಡಾ ಹ್ಯಾಕ್ ಆಗಬಹುದು.
ಲಿಂಕ್ ಕ್ಲಿಕ್ ಮಾಡಿದ್ರೆ ಸಾಕು ಅದರಿಂದಲೂ ಸೈಬರ್ ಖದೀಮರು ಮೊಬೈಲ್ ಹ್ಯಾಕ್ ಮಾಡುತ್ತಿದ್ದರು. ಟೆಕ್ನಾಲಜಿ ಮುಂದುವರೆದಂತೆ ಇದೀಗ ಫೋಟೋ ಕಳುಹಿಸಿ ಅದರ ಮುಖೇನ ಕೂಡಾ ವಾಟ್ಸಾಪ್ ಹ್ಯಾಕ್ ಮಾಡುತ್ತಾರೆ. ಸುರಕ್ಷತೆಯ ದೃಷ್ಟಿಯಿಂದ ನಾವು ಜಾಗರೂಕರಾಗಿರುವುದು ಅವಶ್ಯಕ.
ಹ್ಯಾಕರ್ ಗಳು ತಾವಾಗಿಯೇ ಒಂದು ಫೋಟೋ ಕ್ರಿಯೇಟ್ ಮಾಡಿ ಅದರಲ್ಲಿ ಮಾಲ್ವೇರ್ ತುರುಕಿಸಿ ಸೆಂಡ್ ಮಾಡುತ್ತಾರೆ. ಇದನ್ನು ಯಾರೆಲ್ಲ ಡೌನ್ಲೋಡ್ ಮಾಡುತ್ತಾರೋ ಅವರ ಮೊಬೈಲ್ ತನ್ನಿಂದ ತಾನಾಗಿಯೇ ಹ್ಯಾಕ್ ಆಗುತ್ತದೆ. ಆದರಿಂದ ಗೌಪ್ಯತೆ ಮತ್ತು ಭದ್ರತೆಯ ದೃಷ್ಟಿಯಿಂದ ನಾವು ಸುರಕ್ಷಿತರಾಗಿರುವುದು ಒಳ್ಳೆಯದು.

