ಉಡುಪಿ: ಉಡುಪಿ ನ್ಯಾಯಾಲಯದ ನೂತನ ಉಪ ನ್ಯಾಯಾಲಯದ ಸಂಕೀರ್ಣ ಸುಮಾರು ಹದಿನೈದು ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಈ ಹೊಸ ಸಂಕೀರ್ಣಕ್ಕೆ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಜಸ್ಟೀಸ್ ಇ.ಎಸ್ ಇಂದಿರೇಶ್ ಶಿಲಾನ್ಯಾಸವನ್ನುವನ್ನು ನೆರವೇರಿಸಿದರು.
ಉಡುಪಿ ವಕೀಲರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಇಂದಿರೇಶ್ ಕಕ್ಷಿದಾರರ ಭೇಟಿ ಮತ್ತು ಇತರ ಕಾರ್ಯಗಳಿಗೂ ವಕೀಲರಿಗೆ ಸುಸಜ್ಜಿತ ಭವನದ ಅಗತ್ಯವಿದೆ. ಗುಣಮಟ್ಟದ ಕಾಮಗಾರಿ ನಡೆಯುವಂತೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಈಗಾಗಲೇ ಮೊದಲ ಹಂತದ ಕಾಮಗಾರಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಎರಡನೇ ಹಂತದ ಕಾಮಗಾರಿಗೆ ನೀಲನಕ್ಷೆ ತಯಾರಿಸಲಾಗುತ್ತಿದೆ ಎಂದು ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಹೇಳಿದರು.

