ಕಾರ್ಕಳ: ಮುಂಡ್ಕೂರಿನಿಂದ ಶಿಕಾರಿಪುರಕ್ಕೆ ಹೊಟೇಲ್ ಕೆಲಸಕ್ಕೆಂದು ಹೋಗಿದ್ದ ವ್ಯಕ್ತಿಯೋರ್ವ ನಾಪತ್ತೆಯಾದ ಘಟನೆ ಕಾರ್ಕಳ ತಾಲ್ಲೂಕಿನ ಮುಂಡ್ಕೂರಿನಲ್ಲಿ ನಡೆದಿದೆ.
ನಲ್ವತ್ತೆರಡು ವರ್ಷದ ನಾಗ ಪ್ರಶಾಂತ್ ಕಾಣೆಯಾದ ವ್ಯಕ್ತಿ. ಇವರು ಶಿಕಾರಿಪುರ ಹೈವೇಯಲ್ಲಿರುವ ದೇವಿಪ್ರಸಾದ್ ರೈ ಎಂಬುವವರ ಹೊಟೇಲ್ ನಲ್ಲಿ ಕೆಲಸಕ್ಕೆ ಸೇರಲು ಹೋಗಿದ್ದರು. ಆದರೆ ಪ್ರಶಾಂತ್ ವಿಪರೀತ ಮದ್ಯ ವ್ಯಸನಿಯಾಗಿದ್ದ ಕಾರಣಕ್ಕೆ ದೇವೀಪ್ರಸಾದ್ ಕೆಲಸಕ್ಕೆ ಸೇರಿಸಿಕೊಳ್ಳಲಿಲ್ಲ.
ತದನಂತರ ಮನೆಯವರಿಗೆ ಎಷ್ಟು ಫೋನ್ ಮಾಡಿದರೂ ಸಿಗದೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ಮನೆಗೂ ಬಾರದೆ ಕಾಣೆಯಾಗಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

