ಟೀಂ ಇಂಡಿಯಾ ಕ್ರಿಕೆಟಿಗ ಕೆ.ಎಲ್ ರಾಹುಲ್ ಅವರ ಪತ್ನಿ ಅಥಿಯಾ ಶೆಟ್ಟಿ ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೇ ಕಾರಣಕ್ಕೆ ಕೆ.ಎಲ್ ರಾಹುಲ್ ಐಪಿಎಲ್ ನಲ್ಲಿ ತಮ್ಮ ತಂಡದ ಮೊದಲ ಪಂದ್ಯವನ್ನು ಆಡಲಾಗಲಿಲ್ಲ. ಇದೀಗ ಈ ದಂಪತಿ ಮತ್ತೊಂದು ಪೋಸ್ಟ್ ಹಂಚಿಕೊಳ್ಳುವುದರ ಮುಖೇನ ಮಗುವಿನ ಹೆಸರೇನು ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಅವರು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ನಮ್ಮ ಮಗಳು, ನಮ್ಮ ಸರ್ವಸ್ವ- ಇವಾರಾ ದೇವರ ಕೊಡುಗೆ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಇವಾರಾ ಎಂಬುವುದು ಸಂಸ್ಕೃತ ಪದವಾಗಿದ್ದು ಇದರ ಅರ್ಥ ದೇವರ ಕೊಡುಗೆ ಎಂದು ಬರೆದುಕೊಂಡಿದ್ದಾರೆ.
ಕಳೆದ ಎರಡು ವರ್ಷದ ಮೊದಲು ಕೆ.ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆ ಬಳಿಕ ಕಳೆದ ವರ್ಷ ಸೋಷಿಯಲ್ ಮೀಡಿಯಾದಲ್ಲಿ ತಾವು ಪೋಷಕರಾಗುವ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ಹೆಣ್ಣು ಮಗುವಿಗೆ ಅಥಿಯಾ ಜನ್ಮ ನೀಡಿದ್ದು ಮಗಳಿಗೂ ಅರ್ಥಗರ್ಭಿತ ಹೆಸರನ್ನು ಇಟ್ಟಿದ್ದಾರೆ.

