ಬೇಸಿಗೆ ಕಾಲದಲ್ಲಿ ನೀರಿನಾಂಶ ಇರುವ ಹಣ್ಣು, ತರಕಾರಿಗಳು ಆರೋಗ್ಯಕ್ಕೆ ಎಷ್ಟು ಸತ್ಪರಿಣಾಮಗಳನ್ನು ಬೀರುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಡ್ರೈ ಫ್ರೂಟ್ಸ್ ಗಳು ಕೂಡಾ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರಲ್ಲಿ ವಾಲ್ನಟ್ಸ್ ಕೂಡಾ ಒಂದು. ಅನೇಕ ಪೋಷಕಾಂಶಗಳಿರುವ ಈ ಬೀಜ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು.
ಬೇಸಿಗೆಯಲ್ಲಿ ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ನಾವು ವಾಲ್ನಟ್ಸ್ ನ್ನು ಸೇವಿಸಬೇಕು. ದಿನದಲ್ಲಿ ನಾಲ್ಕರಿಂದ ಐದು ವಾಲ್ನಟ್ ಗಳ ಅರ್ಧ ಭಾಗವನ್ನು ತೆಗೆದುಕೊಂಡು ನೀರಿನಲ್ಲಿ ನೆನೆಸಿಟ್ಟು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅನೇಕ ಬಗೆಯ ಪ್ರಯೋಜನಗಳಿವೆ.
ಬೇಸಿಗೆಯಲ್ಲಿ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಉತ್ತಮ ಪೋಷಕಾಂಶ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ತಡರಾತ್ರಿ ತಿಂದರೆ ಜೀರ್ಣಕ್ರಿಯೆ ಮತ್ತು ನಿದ್ರೆಗೆ ಭಂಗ ತರಬಹುದು.
ಬೇಸಿಗೆಯಲ್ಲಿ ವಾಲ್ನಟ್ಸ್ ನ್ನು ಇತರ ಹಣ್ಣುಗಳ ಜೊತೆಗೆ ಬಾಳೆಹಣ್ಣು ಮತ್ತು ತೆಂಗಿನ ನೀರಿನೊಂದಿಗೆ ಸ್ಮೂಥಿಯಲ್ಲಿ ಕೂಡಾ ಮಿಕ್ಸ್ ಮಾಡಿ ಸೇವಿಸಬಹುದು. ಇದರಿಂದ ದೇಹ ತಂಪಾಗಿರುತ್ತದೆ.

