ದಿನ ಭವಿಷ್ಯ 20-04-2025
ಮೇಷ: ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತ. ಅಚ್ಚರಿಯ ಸಂದೇಶ ಸಿಹಿ ಕನಸನ್ನು ನೀಡುತ್ತದೆ. ನಡವಳಿಕೆ ಸರಳವಾಗಿದ್ದಾಗ ಜೀವನ ಸರಳವಾಗಿರುತ್ತದೆ.
ವೃಷಭ: ಯಾವುದೇ ವ್ಯಕ್ತಿಯ ಸಹಾಯವಿಲ್ಲದೆ ಹಣ ಗಳಿಸಲು ಸಾಧ್ಯವಾಗುತ್ತದೆ. ನೀವು ನಿಮ್ಮ ಮೇಲೆ ನಂಬಿಕೆಯಿಡುವ ಅಗತ್ಯವಿದೆ. ಪ್ರೀತಿಯಲ್ಲಿ ವಿವೇಚನಾ ಶಕ್ತಿ ಬಳಸಿ.
ಮಿಥುನ: ದಿನದ ಆರಂಭದಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು. ಮಳೆ ಪ್ರಣಯದ ದ್ಯೋತಕವಾಗಬಹುದು. ಜೀವನ ಸಂಗಾತಿಯ ಜೊತೆ ಭಾವಪರವಶತೆಯನ್ನು ಹೊಂದುವಿರಿ.
ಕರ್ಕಾಟಕ: ಇಂದು ನೀವು ಚೈತನ್ಯಯುಕ್ತರಾಗಿರುತ್ತೀರಿ. ಪ್ರೀತಿಪಾತ್ರರಿಂದ ಉಡುಗೊರೆ ಸ್ವೀಕರಿಸುತ್ತೀರಿ. ದಿನ ರೋಮಾಂಚಕವಾಗಿರುತ್ತದೆ. ಸ್ನೇಹಿತರು ನಿಮ್ಮ ಕೆಲಸಕ್ಕೆ ಬರುವುದಿಲ್ಲ.
ಸಿಂಹ: ಆಶಾವಾದಿಗಳಾಗಿರಿ. ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತದೆ. ಹಬ್ಬದ ವಾತಾವರಣ ನಿಮ್ಮ ಉದ್ವೇಗವನ್ನು ಶಮನಗೊಳಿಸುತ್ತದೆ.
ಕನ್ಯಾ: ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಿ. ಪ್ರೇಮ ಜೀವನ ರೋಮಾಂಚಕವಾಗಿರುತ್ತದೆ. ಗಡಿಬಿಡಿಯ ನಿರ್ಧಾರಗಳನ್ನು ಕೈಗೊಳ್ಳಬೇಡಿ.
ತುಲಾ: ಒಬ್ಬ ಆಧ್ಯಾತ್ಮಿಕ ವ್ಯಕ್ತಿ ಆಶೀರ್ವಾದ ಮಾಡುತ್ತಾರೆ. ಹಣದ ಲಾಭವಾಗುವ ಪೂರ್ಣ ಸಾಧ್ಯತೆ ಇದೆ. ಮಾನಸಿಕ ಶಾಂತಿ ಸಿಗುತ್ತದೆ.
ವೃಶ್ಚಿಕ: ಆರೋಗ್ಯದ ಬಗ್ಗೆ ಚಿಂತಿಸಲು ನಿರಾಕರಿಸಿ. ಪತ್ನಿಯೊಂದಿಗಿನ ಸಂಬಂಧ ಉತ್ತಮಗೊಳಿಸಲು ಸುದಿನ. ಜನರೊಡನೆ ಬೆರೆಯಲು ಇಂದು ಬಿಡುವಿನ ವೇಳೆ ಹೊಂದಿದ್ದೀರಿ.
ಧನಸ್ಸು: ಮೋಜಿಗಾಗಿ ಹೊರಹೋಗುವವರು ಸಂತೋಷವನ್ನು ಹಂಚಿಕೊಳ್ಳಿ. ನೀವು ಜನಪ್ರಿಯರಾಗುತ್ತೀರಿ. ಕೆಲಸಗಳನ್ನು ಸಮಯದಲ್ಲೇ ಪೂರೈಸಲು ಪ್ರಯತ್ನಿಸಿ.
ಮಕರ: ಹಣದ ನಷ್ಟ ಸಂಭವಿಸಬಹುದು. ಅನಿರೀಕ್ಷಿತ ಒಳ್ಳೆಯ ಸುದ್ದಿ ಆನಂದ ತರುತ್ತದೆ. ಮನೆಯಲ್ಲಿ ಹೆಚ್ಚಿನ ಸಮಯ ನಿದ್ರೆ ಮಾಡಿ ಕಳೆಯುತ್ತೀರಿ.
ಕುಂಭ: ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ. ಯಾವುದೇ ಪರಿಸ್ಥಿತಿ ಇದ್ರೂ ಸಾಲ ಮರುಪಾವತಿಸಬೇಕು. ಇದರಿಂದ ಆರ್ಥಿಕ ಸ್ಥಿತಿ ಸ್ವಲ್ಪ ದುರ್ಬಲವಾಗುತ್ತದೆ.
ಮೀನ: ಮಗುವಿನ ಸಾಧನೆ ಅಪಾರ ಸಂತೋಷ ನೀಡಬಹುದು. ಹಣ ಉಳಿಸುವ ಬಯಕೆ ಪೂರ್ಣಗೊಳ್ಳಬಹುದು. ನಿಮ್ಮ ಸಹನೆ ಕಳೆದುಕೊಳ್ಳಬೇಡಿ. ಒಳ್ಳೆಯ ಬಾಂಧವ್ಯ ಇಟ್ಟುಕೊಳ್ಳಲು ಪ್ರಯತ್ನಿಸಿ.


