ಹೆಬ್ರಿ: ಮನೆಯಲ್ಲಿ ಅಡುಗೆ ಮಾಡಲು ಗ್ಯಾಸ್ ಹಚ್ಚುತ್ತಿದ್ದ ಸಂದರ್ಭ ಗ್ಯಾಸ್ ಸೋರಿಕೆಯಾಗಿ ದಿಢೀರನೆ ಬೆಂಕಿ ಹೊತ್ತಿಕೊಂಡ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಹೆಬ್ರಿಯ ಕೆರೆಬೆಟ್ಟು ಗ್ರಾಮದ ಮಂಡಾಡಿಜಿಡ್ಡಿನಲ್ಲಿ ನಡೆದಿದೆ.
ಮೂವತ್ತೈದು ವರ್ಷದ ಅನೂಪ್ ಮೃತ ದುರ್ದೈವಿ. ಬೆಂಕಿ ತಗುಲಿದ ಪರಿಣಾಮ ಇವರ ದೇಹ ಅರ್ಧ ಭಾಗದಷ್ಟು ಸುಟ್ಟು ಹೋಗಿತ್ತು. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಇವರು ಮನೆಮನೆಗೆ ಗ್ಯಾಸ್ ವಿತರಿಸುವ ಕೆಲಸ ಮಾಡಿಕೊಂಡಿದ್ದರು.
ಘಟನೆಯ ಪರಿಣಾಮ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ದುರಾದೃಷ್ಟವಶಾತ್ ಅವರು ಸಾವಿಗೀಡಾಗಿದ್ದಾರೆ.

