ಕಾಪು: ಬಾಲಿವುಡ್ ನ ಖ್ಯಾತ ನಟ, ಕರಾವಳಿ ಮೂಲದ ಸುನಿಲ್ ಶೆಟ್ಟಿ ಕುಟುಂಬ ಸಮೇತ ಉಡುಪಿ ಜಿಲ್ಲೆಯ ಕಾಪುವಿನ ಹೊಸ ಮಾರಿಗುಡಿ ದೇಗುಲಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ನೂತನವಾಗಿ ನಿರ್ಮಾಣವಾದ ಈ ದೇಗುಲದ ವಿನ್ಯಾಸ, ಶಿಲ್ಪಗಳ ರಚನೆ ಕಂಡು ಸಂತೋಷಪಟ್ಟರು. ಮತ್ತು ಕೆಲಸ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಾಯಿಯ ಜೊತೆ ಇವರು ದೇಗುಲಕ್ಕೆ ಬಂದಿದ್ದರು. ಅವರಿಗೂ ಮಾರಿಯಮ್ಮನ ದರ್ಶನ ಮಾಡಿಸಿದರು.
ವಿಶೇಷ ಪೂಜೆ ಸಲ್ಲಿಸಿ ಪ್ರಸಾದವನ್ನು ಸ್ವೀಕರಿಸಿದರು. ದೇಗುಲದ ವತಿಯಿಂದ ಸುನಿಲ್ ಶೆಟ್ಟಿ ಮತ್ತು ಅವರ ತಾಯಿಯನ್ನು ಗೌರವಿಸಲಾಯಿತು.

