ಬ್ರಹ್ಮಾವರ: ಪುಷ್ಪರಾಜ್ ಎಂಬವರು ಯೋಗೀಶ್ ಎಂಬವರ ಮೇಲೆ ಹಳೇ ವೈಷಮ್ಯದಿಂದ ಮಾರಕಾಸ್ತ್ರದಿಂದ ಹತ್ಯೆ ಮಾಡಲು ಯತ್ನಿಸಿದ ಘಟನೆ ಬ್ರಹ್ಮಾವರದ ಉಪ್ಪೂರು ತೆಂಕಬೆಟ್ಟು ಸ್ವಾಗತ ಗೋಪುರ ಬಳಿ ನಡೆದಿದೆ.
ಮೂರು ವರ್ಷದ ಹಿಂದೆ ಮರಳುಗಾರಿಕೆಯ ವಿಚಾರದಲ್ಲಿ ಇವರಿಗೆ ಗಲಾಟೆ ನಡೆದಿತ್ತು. ಅದೇ ದ್ವೇಷದಲ್ಲಿ ಕೊಲೆ ಮಾಡಲು ಯತ್ನಿಸಿದ್ದಾರೆ. ಆಗ ಮಚ್ಚು ಕುತ್ತಿಗೆಯ ಭಾಗಕ್ಕೆ ತಾಗಿದೆ.
ಮತ್ತೊಮ್ಮೆ ಬೀಸಿದಾಗ ತಡೆಯಲು ಹೋದ ರಮೇಶ್ ಎಂಬವರ ಕೈಗೆ ಕೂಡಾ ಗಾಯವಾಗಿದೆ. ಈ ಬಗ್ಗೆ ಯೋಗಿಶ್ ಅವರು ಗಂಭೀರ ಆರೋಪ ಮಾಡಿದ್ದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

