ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಂತಿಯುತ ತ್ವಚೆ ಪಡೆಯಲು ಏನಾದರೊಂದು ಸರ್ಕಸ್ ಮಾಡುತ್ತಲೇ ಇರುತ್ತೇವೆ. ದೊಡ್ಡ ಜಾಹೀರಾತುಗಳಲ್ಲಿ ಬರುವ ಅಥವಾ ಸೆಲೆಬ್ರಿಟಿಗಳು ಬಳಕೆ ಮಾಡುವ ಕ್ರೀಂಗಳಿಗೆ, ಫೇಸ್ ವಾಶ್ ಗಳಿಗೆ ನಾವು ಹೆಚ್ಚು ಆಕರ್ಷಿತರಾಗುತ್ತೇವೆ. ಆದರೆ ಇದರ ಬದಲು ನಿಮ್ಮ ಮುಖ ಕಾಂತಿಯುತವಾಗಿ ಹೊಳೆಯಲು ಮನೆಯಲ್ಲೇ ಕೆಲವು ಜ್ಯೂಸ್ ಮಾಡಿ ಕುಡೀರಿ. ಪಕ್ಕಾ ರಿಸಲ್ಟ್ ನಿಮ್ಮದಾಗುತ್ತೆ.
ಬೇಸಿಗೆಯಲ್ಲಿ ದೇಹದಲ್ಲಿನ ಬಹಳಷ್ಟು ನೀರು ಬೆವರಿನ ಮೂಲಕ ಹೊರ ಹೋಗುತ್ತದೆ. ಇದಕ್ಕಾಗಿ ಹೆಚ್ಚು ನೀರು ಕುಡಿಯುವುದರೊಂದಿಗೆ ಆರೋಗ್ಯಕರ ಪಾನೀಯಗಳನ್ನು ಸೇವಿಸುವುದು ಉತ್ತಮ.
ಬೇಸಿಗೆಯಲ್ಲಿ ಬೀಟ್ರೂಟ್, ಕ್ಯಾರೆಟ್, ಸೇಬು ಹಣ್ಣಿನ ಜ್ಯೂಸ್ ಮಾಡಿ ಕುಡಿಯುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಟೊಮೆಟೋ ಜ್ಯೂಸ್ ಮಾಡಿ ಕುಡಿಯುವುದರಿಂದ ಕೂಡಾ ಚರ್ಮದ ಮೇಲಿರುವ ಕಪ್ಪು ಕಲೆಗಳನ್ನು ಇಲ್ಲವಾಗಿಸಬಹುದು. ಹಾಗೆಯೇ ಮೊಡವೆಗಳನ್ನು ಕೂಡಾ ತೆಗೆದು ಹಾಕುತ್ತದೆ.
ಕಲ್ಲಂಗಡಿ ಹಣ್ಣಿನ ಜ್ಯೂಸ್ ಕೂಡಾ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ಚರ್ಮವನ್ನು ಆಳವಾಗಿ ಹೈಡ್ರೀಕರಿಸುತ್ತದೆ.
ಒಟ್ಟಾರೆಯಾಗಿ ಬೇಸಿಗೆಯಲ್ಲಿ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ರಾಶಿಗಟ್ಟಲೆ ಅಂಗಡಿಯ ಕ್ರೀಂಗಳನ್ನು ಬಳಸುವ ಬದಲು ನೈಸರ್ಗಿಕವಾಗಿ ಮತ್ತು ಕಡಿಮೆ ಬಜೆಟ್ ನಲ್ಲಿ ಮನೆಯಲ್ಲೇ ಜ್ಯೂಸ್ ತಯಾರಿಸಿ ಕುಡಿಯುವ ವಿಧಾನವನ್ನು ಕೂಡಾ ಅನುಸರಿಸಬಹುದು.

