ಕೇರಳ: ಮೂರು ವರ್ಷದ ಪುಟ್ಟ ಬಾಲಕಿಯೋರ್ವಳು ಮಸಾಲೆದೋಸೆ ತಿಂದು ಮೃತಪಟ್ಟಿರುವ ಘಟನೆ ಕೇರಳದ ತ್ರಿಷೂರ್ ನಲ್ಲಿ ನಡೆದಿದೆ. ಒಲಿವಿಯಾ ಮೃತಪಟ್ಟ ಬಾಲಕಿ ಎಂದು ತಿಳಿದುಬಂದಿದೆ.
ಈ ಬಾಲಕಿ ತನ್ನ ಹೆತ್ತವರ ಜೊತೆ ವಿದೇಶದಲ್ಲಿ ವಾಸವಾಗಿದ್ದಳು. ಅಲ್ಲಿಂದ ಕೇರಳಕ್ಕೆ ಮರಳುವ ಸಂದರ್ಭ ಅಂಗಮಾಲಿ ಬಳಿಯ ಕರಯಂಪರಂನಲ್ಲಿರುವ ಹೊಟೇಲ್ ನಲ್ಲಿ ಮಸಾಲದೋಸೆ ತಿನ್ನಲು ಬಂದಿದ್ದರು. ನಂತರ ಎಲ್ಲರೂ ಅಸ್ವಸ್ಥರಾಗಿದ್ದಾರೆ.
ಕೂಡಲೇ ಎಲ್ಲರೂ ಹತ್ತಿರದ ಆಸ್ಪತ್ರೆಗೆ ದಾಖಲಾದರು. ಆದರೆ ಈ ಪುಟ್ಟ ಕಂದಮ್ಮ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಅವರು ಮಸಾಲೆದೋಸೆ ತಿಂದ ಹೊಟೇಲ್ ನ ವಿರುದ್ಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.

