ಜಮ್ಮು ಕಾಶ್ಮೀರ: ನಿನ್ನೆ ಕಾಶ್ಮೀರದ ಪಹಲ್ಲಾಮ್ ನಲ್ಲಿ ಪಾಕ್ ಉಗ್ರರು ಭಾರತದ ಪ್ರವಾಸಿಗರ ಸಮೇತ ಅನೇಕರ ಮೇಲೆ ದಾಳಿ ನಡೆಸಿ ಇಪ್ಪತ್ತಾರು ಜನರನ್ನು ಹತ್ಯೆ ಮಾಡಿದ್ದಾರೆ. ಉಗ್ರರನ್ನು ಬೆನ್ನಟ್ಟಿದ್ದ ಭಾರತೀಯ ಸೇನಾ ಪಡೆ ಬಾರಾಮುಲ್ಲಾದಲ್ಲಿ ಗಡಿ ನುಸುಳಿ ಬಂದಿದ್ದ ಇಬ್ಬರು ಉಗ್ರರನ್ನು ತಲಾಶ್ ಮಾಡಿದೆ.
ಕಾರ್ಯಾಚರಣೆ ಪ್ರಗತಿಯಲ್ಲಿದ್ದು ಭಯೋತ್ಪಾದಕರಿಂದ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ಸ್ಫೋಟಕ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗಡಿ ನುಸುಳಿ ಬರುತ್ತಿದ್ದ ಉಗ್ರರು ಮತ್ತು ಭಾರತೀಯ ಭದ್ರತಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದ್ದು ಇಬ್ಬರು ರಕ್ತಪಿಪಾಸುಗಳನ್ನು ನಮ್ಮ ವೀರ ಯೋಧರು ಹೊಡೆದುರುಳಿಸಿದ್ದಾರೆ.

