ಉಡುಪಿ: ಮಹಿಳೆಗೆ ಅವಾಚ್ಯವಾಗಿ ನಿಂದಿಸಿ ಕಿರುಕುಳ ನೀಡಿ ಹಲ್ಲೆ ನಡೆಸಿದ ಘಟನೆ ಉಡುಪಿಯ ಕಡೆಕಾರ್ ನಲ್ಲಿ ನಡೆದಿದೆ. ಇವರ ಪತಿ ಪ್ರಜ್ವಲ್, ಭವಾನಿ, ಸೌಮ್ಯ, ಲಜಿತ್ ಬಂಧಿತ ಆರೋಪಿಗಳು.
ರಕ್ಷಾ ಮತ್ತು ಪ್ರಜ್ವಲ್ ದಂಪತಿಯ ವಿವಾಹದ ಸಂಪೂರ್ಣ ಖರ್ಚನ್ನು ರಕ್ಷಾ ಅವರ ಮನೆಯವರೇ ಭರಿಸಿದ್ದರು. ಆದರೂ ಪ್ರಜ್ವಲ್ ಅವರ ಮನೆಯವರು ವಿನಾ ಕಾರಣ ಇವರಿಗೆ ನಿತ್ಯ ಹಿಂಸೆ ನೀಡುತ್ತಿದ್ದರು.
ಮನೆಯಲ್ಲಿರಬೇಕಾದರೆ ಮತ್ತೆ ಲಕ್ಷಾಂತರ ರೂ. ಹಣ ತರುವಂತೆ ಪೀಡಿಸುತ್ತಿದ್ದು ಊಟ, ಉಪಾಹಾರ ಮೊಬೈಲ್ ಕೂಡಾ ಬಳಕೆ ಮಾಡಲು ಕೊಡುತ್ತಿರಲಿಲ್ಲ. ಇವರ ದೌರ್ಜನ್ಯ ಸಹಿಸಲಾಗದೆ ರಕ್ಷಾ ಅವರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

