ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾರತದ ಅನೇಕರು ಅಸುನೀಗಿದ್ದಾರೆ. ಇದೀಗ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಭಾರತದಲ್ಲಿ ಕೋಮು ಸೂಕ್ಷ್ಮತೆಯನ್ನು ಬಿತ್ತರಿಸುತ್ತಿದ್ದ ಪಾಕಿಸ್ತಾನದ ಹದಿನಾರು ಯೂಟ್ಯೂಬ್ ಚಾನೆಲ್ ಗಳನ್ನು ಬಂದ್ ಮಾಡಿ ಕೇಂದ್ರ ಗೃಹ ಇಲಾಖೆ ಮಹತ್ತರ ಆದೇಶ ಹೊರಡಿಸಿದೆ.
ಮುಖ್ಯ ವಿಚಾರವೆಂದರೆ ಪತ್ರಕರ್ತರಾದ ಇರ್ಷಾದ್ ಭಟ್ಟಿ, ಉಮರ್ ಚೀಮಾ, ಅಸ್ಮಾ ಶಿರಾಜಿ ಅವರ ಯೂಟ್ಯೂಬ್ ಚಾನೆಲ್ ಗಳನ್ನು ಕೂಡಾ ಬ್ಯಾನ್ ಮಾಡಲಾಗಿದೆ.
ಈಗಾಗಲೇ ನಿಷೇಧಿಸಿರುವ ಯೂಟ್ಯೂಬ್ ಚಾನೆಲ್ ಗಳ ಪಟ್ಟಿ ಬಿಡುಗಡೆ ಮಾಡಿರುವ ಕೇಂದ್ರ ಗೃಹ ಇಲಾಖೆ ನ್ಯೂಸ್ ಸಂಸ್ಥೆಗಳ ಮೇಲೆ ಕೂಡಾ ನಿಗಾ ಇಟ್ಟಿದೆ.

