ಕುಂದಾಪುರ: ಸತೀಶ್ ಖಾರ್ವಿ ಅವರ ಹೆಸರು ಬಹುಶಃ ಎಲ್ಲರಿಗೂ ಚಿರಪರಿಚಿತ. ಇವರು ಪವರ್ ಲಿಫ್ಟಿಂಗ್ ನಲ್ಲೇ ಸಾಧನೆಯ ಶಿಖರವೇರಿದವರು. 2019ರಲ್ಲಿ ಕಜಕಿಸ್ತಾನದಲ್ಲಿ ನಡೆದ ಏಷ್ಯನ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ 3 ಚಿನ್ನ ಹಾಗೂ 1 ಬೆಳ್ಳಿಯ ಪದಕ ಗೆದ್ದು ಕರಾವಳಿಗೆ ಕೀರ್ತಿ ತಂದಿದ್ದರು. ಇದೀಗ ಮತ್ತೊಂದು ಸಾಧನೆಯ ಮೂಲಕ ವೈರಲ್ ಆಗಿದ್ದಾರೆ.
ಇವರು ಬೆಂಗಳೂರಿನ ಕೆ ಜಿ ಎಸ್ ಕ್ಲಬ್ ನಲ್ಲಿ ನಡೆದ ರಾಜ್ಯ ಮಟ್ಟದ ಕ್ಲಾಸಿಕ್ ಪವರ್ ಲಿಫ್ಟಿಂಗ್ ಸಬ್ ಜೂನಿಯರ್, ಜೂನಿಯರ್ ಮಾಸ್ಟರ್, ಸ್ಪರ್ಧೆಯ M-1 66 ಕೆಜಿ ವಿಭಾಗದಲ್ಲಿ 445 ಕೆಜಿ ಭಾರವನ್ನು ಎತ್ತಿ ಚಿನ್ನದ ಪದಕ ಪಡೆದಿದ್ದಾರೆ.
ಕುಂದಾಪುರದ ಹರ್ಕ್ಯುಲಸ್ ಜಿಮ್ಮಿನ ವ್ಯವಸ್ಥಾಪಕರಾಗಿರುವ ಇವರು ತುಳುನಾಡು ರಕ್ಷಣಾ ವೇದಿಕೆಯ ಕುಂದಾಪುರ ಘಟಕದ ಅಧ್ಯಕ್ಷರಾಗಿಯೂ ಕೂಡಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಈ ಸಾಧನೆಗೆ ಪ್ರಶಂಸೆ ವ್ಯಕ್ತವಾಗಿದೆ.




