ಮೇಷ: ಇಂದು ನೀವು ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕು. ಒತ್ತಡ ಮತ್ತು ಉದ್ವೇಗಕ್ಕೆ ಒಳಗಾಗುತ್ತೀರಿ. ನಿಮ್ಮ ಭಾಷೆಯನ್ನು ನಿಯಂತ್ರಿಸಿ. ಸಂಗಾತಿಗೆ ನಿಮ್ಮಿಂದ ಅಸಮಾಧಾನವಾಗುತ್ತದೆ.
ವೃಷಭ: ಪ್ರತೀ ವ್ಯಕ್ತಿಯನ್ನು ಆಲಿಸಿ. ಸಾಲ ತೆಗೆದುಕೊಂಡಿದ್ದರೆ ಮರುಪಾವತಿಸಿ. ಸಾಧ್ಯವಾದಷ್ಟು ಜನರಿಂದ ದೂರವಿರಿ. ಸಂಗಾತಿ ಯೋಜನೆ ಹುಟ್ಟುಹಾಕಬಹುದು.
ಮಿಥುನ: ಬಯಸಿದ ಲಾಭ ಇರುವುದಿಲ್ಲ. ಹಣ ಹೂಡುವ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶವಿರಬಹುದು.
ಕರ್ಕಾಟಕ: ಯೋಗ, ಧ್ಯಾನ ಮಾನಸಿಕವಾಗಿ ಸದೃಢರಾಗಲು ಸಹಾಯ ಮಾಡುತ್ತದೆ. ಪ್ರೀತಿಪಾತ್ರರು ಬದ್ಧತೆಯನ್ನು ಬಯಸುತ್ತಾರೆ. ನಿಮ್ಮಿಂದ ಕಷ್ಟವಾಗುವ ಭರವಸೆಯನ್ನು ನೀಡಬೇಡಿ.
ಸಿಂಹ: ವ್ಯಕ್ತಿತ್ವ ಸುಧಾರಿಸಲು ಪ್ರಯತ್ನಿಸಿ. ಪ್ರೀತಿಸಯವವರಿಂದ ಉಡುಗೊರೆ ಪಡೆಯಲು ಒಳ್ಳೆಯ ದಿನ. ಮಾತನಾಡುವುದು ಅಗತ್ಯವಿಲ್ಲದಿದ್ದರೆ ಮೌನವಾಗಿರಿ.
ಕನ್ಯಾ: ಇತರರನ್ನು ಟೀಕಿಸುವ ಅಭ್ಯಾಸದಿಂದ ಇಂದು ನೀವೆ ಟೀಕೆಗೊಳಗಾಗುವ ಸಾಧ್ಯತೆ. ಕುಟುಂಬದ ಜೊತೆ ಸಮಯ ಕಳೆಯುವ ದಿನ. ಹಾಸ್ಯಪ್ರಜ್ಞೆ ಜಾಗ್ರತವಾಗಿರಲಿ.
ತುಲಾ: ವೈಯಕ್ತಿಕ ಸಮಸ್ಯೆಗಳು ಮಾನಸಿಕ ಶಾಂತಿಯನ್ನು ಹಾಳು ಮಾಡುತ್ತದೆ. ಓದುವ ಮೂಲಕ ಮಾನಸಿಕ ವ್ಯಾಯಾಮ ಮಾಡಿಕೊಳ್ಳಿ. ಕೆಲಸಕ್ಕೆ ಮೆಚ್ಚುಗೆ ದೊರಕಲಿದೆ.
ವೃಶ್ಚಿಕ: ನಿಮ್ಮ ಬದುಕನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತ. ಕುಟುಂಬಕ್ಕೆ ಸಂತೋಷ ಮತ್ತು ಆನಂದ ಇರುತ್ತದೆ.
ಧನಸ್ಸು: ದುಃಖಿತರಾಗಿ ಮತ್ತು ಖಿನ್ನರಾಗಿರಬೇಡಿ. ಹಣದ ಪ್ರಯೋಜನ ಪಡೆಯುವ ಸಾಧ್ಯತೆ. ಪ್ರೇಮಿಗಳು ಯಾವಾಗಲೂ ಮುಖಸ್ತುತಿ ಮಾಡುವವರು.
ಮಕರ: ಕುಡಿಯುವ ಅಭ್ಯಾಸ ಬಿಡಲು ಇದು ಪವಿತ್ರ ದಿನ. ಕೆಲಸದ ಒತ್ತಡ ಮನಸ್ಸನ್ನು ಆವರಿಸುತ್ತದೆ. ಪ್ರೇಮ ಸಂಗಾತಿ ಅದ್ಭುತವಾದದನ್ನು ಕೊಡುತ್ತಾರೆ. ಅಪಘಾತ ಸಂಭವಿಸುವ ಸಾಧ್ಯತೆ ಇದೆ.
ಕುಂಭ: ಹೆಂಡತಿಯ ಜೊತೆ ಕುಟುಂಬದ ಸಮಸ್ಯೆಗಳನ್ನು ಹಂಚಿಕೊಳ್ಳಿ. ಆಹ್ವಾನವನ್ನು ಸಭ್ಯತೆಯಿಂದ ಸ್ವೀಕರಿಸಿ. ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗುವುದಿಲ್ಲ.
ಮೀನ: ಆರ್ಥಿಕ ಜೀವನ ಅಷ್ಟೊಂದು ಚೆನ್ನಾಗಿಲ್ಲ. ಸಂಬಂಧಿಕರು ಮತ್ತು ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಗಳು. ಕಣ್ಣು, ಕಿವಿಗಳನ್ನು ತೆರೆದಿಟ್ಟು ಕೆಲಸ ಮಾಡಿ.

