ಉಡುಪಿ: ದಸರಾ ಸಂದರ್ಭ ಹುಲಿವೇಷ ಹಾಕಿ ಮನರಂಜಿಸುತ್ತಿದ್ದ ಯುವ ಹುಲಿ ವೇಷಧಾರಿಯೋರ್ವರು ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ.
ಉಡುಪಿಯ ಅಜ್ಜರಕಾಡು ನಿವಾಸಿ, ಮೂವತ್ತೊಂದು ವರ್ಷದ ಅನಿಲ್ ಕುಮಾರ್ ವಿಧಿವಶರಾದ ಯುವಕ. ಕಾಡಬೆಟ್ಟು ಅಶೋಕ್ ರಾಜ್ ಅವರ ತಂಡದ ಹುಲಿ ಕುಣಿತದಲ್ಲಿ ಅನಿಲ್ ಕುಮಾರ್ ಅವರು ಕಲಾವಿದರಾಗಿ ಗುರುತಿಸಿಕೊಂಡಿದ್ದರು.
ತಮ್ಮ ಹುಲಿ ಕುಣಿತಕ್ಕೆ ಅವರದ್ದೇ ಆದ ಅಭಿಮಾನಿಗಳನ್ನು ಕೂಡಾ ಸಂಪಾದಿಸಿದ್ದರು. ಇದರ ಜೊತೆಗೆ ವೃತ್ತಿಯಾಗಿ ಇವರು ಪೈಂಟಿಂಗ್ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅಪಾರ ಬಂಧು-ಬಳಗ, ಸ್ನೇಹಿತರನ್ನು ಇವರು ಅಗಲಿದ್ದಾರೆ.

