ಕಾಂತಾರ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದ್ದ ನಟ ರಿಷಬ್ ಶೆಟ್ಟಿ ಕಾಂತಾರ-೧ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಅವರ ಕ್ಯೂಟ್ ಮಗಳ ರ್ಯಾಂಪ್ ವಾಕ್ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಾ ಇದೆ.
ರಿಷಬ್ ಶೆಟ್ರು ಹಾಗೂ ಪ್ರಗತಿ ದಂಪತಿಯ ಮುದ್ದಾದ ಮಕ್ಕಳಾದ ರಣ್ವಿತ್ ಮತ್ತು ರಾಧ್ಯಾ ಓಕ್ವುಡ್ ಇಂಡಿಯನ್ ಸ್ಕೂಲ್ ನಲ್ಲಿ ನಡೆದ ರ್ಯಾಂಪ್ ವಾಕ್ ನಲ್ಲಿ ಭಾಗವಹಿಸಿದ್ದು ಸೂಪರ್ ಆಗಿ ಪ್ರದರ್ಶನ ನೀಡಿದ್ದಾರೆ.
ಮುದ್ದಾದ ಮಕ್ಕಳ ವೀಡೊಯೋವನ್ನು ಪ್ರಗತಿ ಶೆಟ್ಟಿ ಅವರು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು ನೆಟ್ಟಿಗರಿಂದ ಮಿರಮಿರ ಮಿಂಚುತ್ತಿರುವ ಮುದ್ದಾದ ಮಕ್ಕಳಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


