ಮಿತಿಮೀರಿದ ಅಪಘಾತಗಳ ಜಂಕ್ಷನ್ ಆಗಿರುವ ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನ ಹೆಣಗಳು ಉರುಳುತ್ತಿದ್ದರೂ ಎಚ್ಚೆತ್ತುಕೊಳ್ಳದ ಇಲಾಖೆಯ ವಿರುದ್ಧ ತುರ್ತು ಸರ್ವೀಸ್ ರಸ್ತೆಗೆ ಆಗ್ರಹಿಸಿ ಇಂದು ಎ.29 ರಂದು ಬ್ರಹ್ಮಾವರದಲ್ಲಿ ಬ್ರಹತ್ ಪ್ರತಿಭಟನೆ ನಡೆಯಲಿದೆ.
ಬ್ರಹ್ಮಾವರದ ಸಿಟಿ ಸೆಂಟರ್ ನಿಂದ ಧೂಪದಕಟ್ಟೆಯವರೆಗೆ ಸರ್ವಿಸ್ ರಸ್ತೆಗೆ ಆಗ್ರಹಿಸಿ ಇಂದು ಬ್ರಹ್ಮಾವರ ಫ್ಲೈ ಓವರ್ ಹೋರಾಟ ಸಮಿತಿಯ ನೇತೃತ್ವದಲ್ಲಿ ಮಧ್ಯಾಹ್ನ 3.30ಕ್ಕೆ ಬ್ರಹತ್ ಪ್ರತಿಭಟನೆ ನಡೆಯಲಿದ್ದು ಬ್ರಹ್ಮಾವರದ ಆಸುಪಾಸಿನ 50 ಕ್ಕೂ ಹೆಚ್ಚು ಸಂಘಟನೆಗಳು ಭಾಗವಹಿಸಲಿವೆ.

ಬ್ರಹ್ಮಾವರ ಸಿಟಿ ಸೆಂಟರ್ ನಿಂದ ಎಸ್ ಎಂ ಎಸ್ ಕಾಲೇಜು ಮೂಲಕ ದೂಪದಕಟ್ಟೆ ವರೆಗೆ ತುರ್ತು ಸರ್ವೀಸ್ ರಸ್ತೆಯಾಗಬೇಕು ಮತ್ತು ಸಮಸ್ಯೆಗೆ ಶಾಶ್ವತ ಪರಿಹಾರವಾಗಿರುವ ಬ್ರಹ್ಮಾವರದ ಜನತೆಯ ಬಹುದಿನಗಳ ಬೇಡಿಕೆಯಾಗಿರುವ ಫ್ಲೈ ಓವರ್ ನಿರ್ಮಾಣ ಅತಿಶೀಘ್ರದಲ್ಲಿ ಆಗಬೇಕು ಎನ್ನುವುದು ಹೋರಾಟಗಾರರ ಬೇಡಿಕೆಯಾಗಿದೆ .

