ಈ ಉರಿಬಿಸಿಲಿಗೆ ಏನಾದರೂ ಪಾನೀಯ ಕುಡಿಯೋಣ ಅಂದ್ರೆ ನಮಗೆ ಮೊದಲು ನೆನಪಾಗೋದು ಅಗ್ಗದ ಮತ್ತು ತಂಪಾದ ನಿಂಬೆ ಶರಬತ್ತು. ಮನೆಗೆ ಅತಿಥಿಗಳು ಬಂದಾಗ ಕೂಡಾ ನಾವು ಥಟ್ಟನೆ ಮಾಡಿ ಕೊಡೋದು ಇದನ್ನೆ. ದೇಹ ಹೈಡ್ರೇಟ್ ಆಗಿರಲು ಇದು ಸಹಕಾರಿ. ದೇಹ ಉಲ್ಲಾಸಭರಿತವಾಗಿಸುವಂತಹ ಈ ಪಾನೀಯವನ್ನು ಯಾವಾಗ ಕುಡಿದ್ರೆ ಒಳ್ಳೇದು ಗೊತ್ತಾ…?
ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವಿದ್ದು ರೋಗನಿರೋಧಕ ಶಕ್ತಿಯನ್ನು ಕೂಡಾ ಹೆಚ್ಚಿಸುತ್ತದೆ. ಬೇಸಿಗೆಯಲ್ಲಿ ನಿಶ್ಯಕ್ತಿ ಎನಿಸಿದಾಗ ಅಥವಾ ಮಧ್ಯಾಹ್ನದ ಹೊತ್ತಿಗೆ ನಿಂಬೆ ನೀರು ಕುಡಿಯುವುದು ಉತ್ತಮ.
ಅಲ್ಲದೆ ಖಾಲಿ ಹೊಟ್ಟೆಯಲ್ಲಿ ನಾವು ನಿಂಬೆ ಹಣ್ಣಿನ ನೀರು ಕುಡಿದ್ರೆ ದೇಹದ ಕೊಬ್ಬು ಕರಗಿ ತೂಕ ಕೂಡಾ ಕಡಿಮೆಯಾಗುತ್ತದೆ. ಹಾಗೆಯೇ ಊಟದ ನಂತರ ನಿಂಬೆ ಜ್ಯೂಸ್ ಕುಡಿದ್ರೆ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ.
ರಾತ್ರಿ ವೇಳೆ ನಿಂಬೆ ಜ್ಯೂಸ್ ಕುಡಿಯುವುದು ಸೂಕ್ತವಲ್ಲ. ಇದರಿಂದ ಜೀರ್ಣಕ್ರಿಯೆ ಹಾಳಾಗಬಹುದು. ವ್ಯಾಯಾಮದ ನಂತರ ನಾವು ಈ ಜ್ಯೂಸ್ ಕುಡಿದರೆ ಒಳ್ಳೆಯದು.

