ಮಂಗಳೂರು: ಸುಹಾಸ್ ಶೆಟ್ಟಿ ಘಟನೆಯ ಬಳಿಕ ಕರಾವಳಿ ಪ್ರಕ್ಷುಬ್ಧವಾಗಿದ್ದು, ಬಜಪೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಮಂಗಳೂರು ಹೊರವಲಯದಲ್ಲಿ ಮತ್ತೊಂದು ದಾಳಿ ನಡೆದಿದೆ.
ಮಂಗಳೂರು ಹೊರವಲಯದ ಕಣ್ಣೂರಿನಲ್ಲಿ ಶುಕ್ರವಾರ (ಮೇ 02) ಮುಂಜಾನೆ ಮೂರು ಗಂಟೆಗೆ ಐವರು ದುಷ್ಕರ್ಮಿಗಳು ಮುಸ್ಲಿಂ ಯುವಕನಿಗೆ ಚಾಕು ಇರಿದಿದ್ದಾರೆ.
ಮಂಗಳೂರು ಮಾರುಕಟ್ಟೆಗೆ ಕೆಲಸಕ್ಕೆ ಹೋಗುತ್ತಿದ್ದ ಇರ್ಶಾದ್ ಎಂಬ ಯುವಕನ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಇರ್ಶಾದ್ ಮನೆಯೊಂದಕ್ಕೆ ಓಡಿಹೋಗಿ ಜೀವ ಉಳಿಸಿಕೊಂಡಿದ್ದಾನೆ. ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಇರ್ಶಾದ್ಗೆ ಚಿಕಿತ್ಸೆ ನೀಡಲಾಗುತ್ತಿದೆ.

