ಮಂಗಳೂರು: ಇಂದು ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ದ.ಕ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಉಡುಪಿಗೆ ದ್ವಿತೀಯ ಸ್ಥಾನ ಲಭಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ 91.12 ಶೇಕಡ ಫಲಿತಾಂಶ ಬಂದಿದ್ದು ಉಡುಪಿ ಜಿಲ್ಲೆಗೆ 89.96 ಫಲಿತಾಂಶ ಲಭಿಸಿದೆ. ಕಲಬುರಗಿ ಜಿಲ್ಲೆ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ರಾಜ್ಯಮಟ್ಟದಲ್ಲಿ ಅಧಿಕ ಮಾರ್ಕ್ ಪಡೆದು ರ್ಯಾಂಕ್ ಗಳಿಸಿದ ಒಟ್ಟು 22 ವಿದ್ಯಾರ್ಥಿಗಳು 625 ಅಂಕಕ್ಕೆ 625 ಅಂಕ ಗಳಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ಬಾರಿ ಫಲಿತಾಂಶದಲ್ಲಿ ಎಂಟು ಶೇಕಡ ಹೆಚ್ಚಳ ಕಂಡಿದೆ.

