ಕಾರ್ಕಳ: ಮಲ್ಪೆ ಬಂದರಿನಿಂದ ತಮಿಳುನಾಡಿಗೆ ಮೀನು ಸಾಗಾಟ ಮಾಡುತ್ತಿದ್ದ ಲಾರಿಗೆ ಮುಸುಕುಧಾರಿಗಳ ಹಾಗೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ಕಾರ್ಕಳದ ಸಾಣೂರು ಗ್ರಾಮದ ಕೇಮಾರು ಪರ್ಪಲೆಯಲ್ಲಿ ನಡೆದಿದೆ.
ತಮಿಳುನಾಡು ಮೂಲದ ಎಂ. ಮಣಿಕಂಠನ್ ಎಂಬವರು ಗಾಯಗೊಂಡ ಚಾಲಕ. ಕಾರ್ಕಳ ಕಡೆಯಿಂದ ಎರಡು ಬೈಕಿನಲ್ಲಿ ಬಂದ ಮೂವರು ಮುಸುಕುಧಾರಿಗಳು ಲಾರಿಯ ಮುಂಭಾಗದ ಗಾಜಿಗೆ ಕಲ್ಲು ಎಸೆದಿದ್ದಾರೆ.
ಗಾಜು ಹಾನಿಯಾಗಿದ್ದು ಸುಮಾರು ಹದಿನೈದು ಸಾವಿರ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

