ಸಾಮಾನ್ಯವಾಗಿ ದೇಹದಲ್ಲಿ ಬರುವ ನೋವು ಅತ್ಯಂತ ಕಿರಿಕಿರಿ ಎನಿಸಿ ಬಿಡುತ್ತದೆ. ಯಾವ ಕೆಲಸ ಮಾಡಲೂ ಆಸಕ್ತಿ ಅನ್ನೋದು ಇರೋದಿಲ್ಲ. ಅದರಲ್ಲೂ ವಿಪರೀತ ನೋವು ಕಾಣಿಸಿಕೊಂಡಾಗ ಅಂತೂ ತಾತ್ಕಾಲಿಕ ರಿಲೀಫ್ ಗೆ ಆದ್ರೂ ನಾವು ಪೇನ್ ಕಿಲ್ಲರ್ ಮಾತ್ರೆಗಳ ಮೊರೆ ಹೋಗುತ್ತೇವೆ. ಆದರೆ ಇಂತಹ ಟ್ಯಾಬ್ಲೆಟ್ಸ್ ಗಳು ನಮ್ಮ ಆರೋಗ್ಯದ ಮೇಲೆ ಎಷ್ಟೆಲ್ಲಾ ದುಷ್ಪರಿಣಾಮಗಳನ್ನು ಬೀರುತ್ತದೆ ಗೊತ್ತಾ….??
ವೈದ್ಯರ ಬಳಿಗೆ ಹೋದರೆ ತುಂಬಾ ಖರ್ಚು ಎಂದು ಮೆಡಿಕಲ್ ಗೆ ಹೋಗಿ ನೋವು ನಿವಾರಕ ಮಾತ್ರೆಗಳನ್ನು ಖರೀದಿ ಮಾಡ್ತೇವೆ. ಆದರೆ ಇಂತಹ ಮಾತ್ರೆಗಳು ಲಿವರ್ ಮತ್ತು ಮೂತ್ರಪಿಂಡಗಳಿಗೆ ಅಪಾಯವನ್ನುಂಟು ಮಾಡುತ್ತದೆ.
ಅಷ್ಟೇ ಅಲ್ಲದೆ ಇಂತಹ ಅನೇಕ ರೀತಿಯ ಮಾತ್ರೆಗಳು ಹೊಟ್ಟೆಯ ಒಳಪದರವನ್ನು ಕೂಡಾ ಹಾನಿಗೊಳಿಸಬಹುದು. ಇದು ರಕ್ತಸ್ರಾವ, ಹೊಟ್ಟೆನೋವು, ಜಠರದ ಹುಣ್ಣುಗಳಿಗೆ ಕಾರಣವಾಗುತ್ತದೆ. ವಯಸ್ಸಾದಂತೆ ಮತ್ತಷ್ಟೂ ಗಂಭೀರ ಸಮಸ್ಯೆಗಳಿಗೆ ನಾವೇ ಆಹ್ವಾನ ಕೊಟ್ಟಂತೆ ಆಗುತ್ತದೆ.
ಹೃದಯದ ಖಾಯಿಲೆಯನ್ನು ಕೂಡಾ ಈ ನೋವುನಿವಾರಕ ಮಾತ್ರೆಗಳು ಬರಮಾಡಿಕೊಳ್ಳುತ್ತದೆ. ಆದ್ದರಿಂದ ಯಾವುದೇ ಪೇನ್ ಕಿಲ್ಲರ್ ಮಾತ್ರೆ ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯುವುದು ಅತೀ ಅವಶ್ಯಕ…

