ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಮಂದಾರ್ತಿಯಲ್ಲಿ ಪ್ರತೀ ವರ್ಷ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ಸಾಮಾಜಿಕ ಕೈಂಕರ್ಯಗಳು ನಡೆಯುವುದು ವಾಡಿಕೆ. ಅದರಂತೆ ಇದೇ ಬರುವ ಮೇ 7ರಂದು ಸನ್ನಿಧಾನದಲ್ಲಿ 23ನೇ ವರ್ಷದ ಸಾಮೂಹಿಕ ವಿವಾಹ ಮಾಂಗಲ್ಯ ಭಾಗ್ಯ ಕಾರ್ಯಕ್ರಮ ನಡೆಯಲಿದೆ. ಈ ಸಾಮೂಹಿಕ ವಿವಾಹಕ್ಕೆ ಈಗಾಗಲೇ 43 ಕ್ಕೂ ಹೆಚ್ಚು ಜೋಡಿಗಳು ನೋಂದಣಿ ಮಾಡಿ ಕೊಂಡಿವೆ. ವಿವಾಹವಾಗುವ ಜೋಡಿಗಳಿಗೆ ದೇವಸ್ಥಾನದವತಿಯಿಂದ ವಧುವಿಗೆ ಮಾಂಗಲ್ಯ ತಾಳಿ, ಸೀರೆ ಮತ್ತು ವರನಿಗೆ ಬಟ್ಟೆಗಳನ್ನು ನೀಡಲಾಗುತ್ತದೆ. ಹಾಗೆಯೇ ವಧು ವರರ ಕಡೆಯವರಿಗೆ ಊಟದ ವ್ಯವಸ್ಥೆಯೂ ಇರುತ್ತದೆ
ಪ್ರತೀ ವರ್ಷ ದೇಗುಲದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ನಡೆಯುತ್ತಿದ್ದು ಅನೇಕರು ನೋಂದಾವಣಿ ಮಾಡಿಕೊಳ್ಳುತ್ತಾರೆ. ಆರ್ಥಿಕವಾಗಿ ಹಿಂದುಳಿದವರು ದಾಂಪತ್ಯ ಜೀವನಕ್ಕೆ ಕಾಲಿಡಲು ಈ ಉತ್ತಮ ಕಾರ್ಯಗಳು ಪೂರಕವಾಗುತ್ತಿದೆ.
ವಿವಾಹ ನೋಂದಾವಣಿ ಮಾಡಿಕೊಳ್ಳಲು ಇಚ್ಛಿಸುವವರು ಅಥವಾ ಹೆಚ್ಚಿನ ಮಾಹಿತಿಗಾಗಿ 9071160933 ಈ ನಂಬರನ್ನು ಸಂಪರ್ಕಿಸಿ…


