ಮೇಷ: ಭಾವನಾತ್ಮಕ ನಿರ್ಧಾರ ತೆಗೆದುಕೊಳ್ಳುವಾಗ ಸ್ಥಿಮಿತ ಕಳೆದುಕೊಳ್ಳಬೇಡಿ. ಮನೆಯ ಸದಸ್ಯರೊಬ್ಬರ ವರ್ತನೆಯಿಂದ ನೀವು ತೊಂದರೆಗೊಳಗಾಗಬಹುದು. ಇಂದು ವೈವಾಹಿಕ ಜೀವನದ ಪ್ರೇಮಮಯ ದಿನ.
ವೃಷಭ: ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ಯಾವುದೇ ಫಲಿತಾಂಶ ನೀಡದ ಜನರನ್ನು ಮರೆತುಬಿಡಿ. ನಿಮ್ಮ ಪ್ರಣಯದ ಸಂಗಾತಿಯನ್ನು ಚುಡಾಯಿಸುತ್ತೀರಿ.
ಮಿಥುನ: ಸ್ನೇಹಿತರ ಜೊತೆ ಸಂತೋಷ ಹಂಚಿಕೊಳ್ಳಬಹುದು. ಪತ್ನಿಯೊಂದಿಗೆ ಶಾಪಿಂಗ್ ನ್ನು ಅತಿಯಾಗಿ ಅನುಭವಿಸುತ್ತೀರಿ. ಪ್ರೇಮಿಯ ಜೊತೆ ಹೊರಗೆ ಹೋದಾಗ ವರ್ತನೆಯಲ್ಲಿ ನೈಜತೆಯಿರಲಿ.
ಕರ್ಕಾಟಕ: ವ್ಯಕ್ತಿತ್ವ ಸುಧಾರಿಸಲು ಗಂಭೀರ ಪ್ರಯತ್ನ ಮಾಡಿ. ಪ್ರಿಯತಮೆಯ ಜೊತೆ ಕೆಲವು ಭಿನ್ನಾಭಿಪ್ರಾಯ ತಲೆದೋರಬಹುದು. ನಿಮ್ಮ ಪಾಲುದಾರರನ್ನು ಲಘುವಾಗಿ ತೆಗೆದುಕೊಳ್ಳಬೇಡಿ.
ಸಿಂಹ: ಯಾವುದೇ ವಿಷಯದ ಬಗ್ಗೆ ಜಗಳವಾಗುವ ಸಾಧ್ಯತೆ ಇದೆ. ನಿಮ್ಮ ಒರಟು ವರ್ತನೆ ಸಂಬಂಧದಲ್ಲಿ ಬಹಳಷ್ಟು ಅಸಾಮರಸ್ಯ ತರಬಹುದು.
ಕನ್ಯಾ: ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ. ಯಾರಾದರೂ ಪ್ರೇಮ ನಿವೇದನೆ ಮಾಡುತ್ತಾರೆ. ಪ್ರೀತಿ ಯಾವಾಗಲೂ ಭಾವಪೂರ್ಣವಾಗಿದೆ.
ತುಲಾ: ಜೀವನದ ಒತ್ತಡಗಳಿಂದ ಶಮನ ಪಡೆಯುತ್ತೀರಿ. ಜೀವನಶೈಲಿ ಬದಲಿಸಲು ಸರಿಯಾದ ಸಮಯ. ಪರ್ಸ್ ಕಳೆದುಕೊಳ್ಳುವ ಸಾಧ್ಯತೆ.
ವೃಶ್ಚಿಕ: ಸಾಲಗಾರನು ಮನೆ ಬಾಗಿಲಿಗೆ ಬರಬಹುದು. ಭಾವನೆಗಳನ್ನು ಗ್ರಹಿಸಲು ಮನಸ್ಸನ್ನು ಪ್ರೋತ್ಸಾಹಿಸಿ. ಆರ್ಥಿಕ ಬಿಕ್ಕಟ್ಟಿಗೆ ಸಿಲುಕಬಹುದು.
ಧನಸ್ಸು: ತಿರುವುಗಳಲ್ಲಿ ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದಿರಿ. ಹಣದ ಲಾಭ ನಿರೀಕ್ಷೆಯಂತಿರುವುದಿಲ್ಲ. ಸಂಗಾತಿಯ ಸ್ಟೇಟಸ್ ನಿಂದ ಅಚ್ಚರಿ ಪಡುತ್ತೀರಿ.
ಮಕರ: ನಿಮ್ಮ ಮನಸ್ಸು ಇತ್ತೀಚಿನ ಘಟನೆಗಳಿಂದ ತೊಂದರೆಗೊಳಗಾಗುತ್ತದೆ. ನಿಮ್ಮ ಸಕಾಲಿಕ ಸಹಾಯ ಇನ್ನೊಬ್ಬರ ಜೀವ ಉಳಿಸುತ್ತದೆ. ನಿಮ್ಮ ಸಾಮರ್ಥ್ಯ ಸಮೃದ್ಧ ಲಾಭ ತಂದುಕೊಡುತ್ತದೆ.
ಕುಂಭ: ಸಂತೋಷವನ್ನು ಹಂಚಿಕೊಳ್ಳಿ. ಶುದ್ಧ ಪ್ರೀತಿಯನ್ನು ಅನುಭವಿಸಿ. ನಿರೀಕ್ಷೆಗಳನ್ನು ಪೂರೈಸಿಕೊಳ್ಳುತ್ತೀರಿ.
ಮೀನ: ನಿಮಗೆ ಸಾಧ್ಯವಿರುವುದಕ್ಕಿಂತ ಹೆಚ್ಚು ಮಾಡಲು ಒಪ್ಪಿಕೊಳ್ಳಬೇಡಿ. ಇತರರನ್ನು ಸಂತೋಷಪಡಿಸಲು ನಿಮ್ಮ ಮೇಲೆ ಒತ್ತಡ ಹಾಕಬೇಡಿ. ಹಣದ ಲಾಭ ನಿಮ್ಕ ನಿರೀಕ್ಷೆಯಂತಿರುವುದಿಲ್ಲ.

