ಮಲ್ಪೆ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಿಂದ ಸಾವನ್ನಪ್ಪಿದ ಹಿಂದೂಗಳಿಗೆ ಮಲ್ಪೆ ಕಡಲ ತೀರದಲ್ಲಿ ಸ್ಥಳೀಯ ಯುವಕರು ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳುವ ಮೂಲಕ ಅಪರ ಕ್ರಿಯೆ ನಡೆಸಲಾಯಿತು.
ಅಭಿನವ ಭಾರತ ಸೊಸೈಟಿ ಸಂಘಟನೆಯಡಿ ಮೃತ ಹಿಂದೂಗಳ ಆತ್ಮ ಸದ್ಗತಿಗಾಗಿ ಇಪ್ಪತ್ತೈದು ಯುವಕರು ಮೃತರ ಭಾವಚಿತ್ರ ಹಿಡಿದು ಪುಷ್ಪಾರ್ಚನೆ ಸಲ್ಲಿಸಿದರು.
ಸಾಮೂಹಿಕ ಮಂತ್ರಪಠಣದೊಂದಿಗೆ ಮಲ್ಪೆಯ ಹನುಮಾನ್ ವಿಠೋಭ ರುಕ್ಮಯಿ ಭಜನಾ ಮಂದಿರದ ಮುಂಭಾಗ ಕಾರ್ಯಕ್ರಮ ನಡೆಯಿತು.

