ಕಾಪು: ಕಾಪುವಿನ ಮಲ್ಲಾರ್ ನಲ್ಲಿ ಇತ್ತೀಚೆಗೆ ಕಳ್ಳನೋರ್ವ ಆರ್.ಡಿ ಮಂಜಿಲ್ ಮನೆಗೆ ನುಗ್ಗಿ ನಗದು ಮತ್ತು ಬೆಲೆ ಬಾಳುವ ವಾಚ್ ಗಳನ್ನು ಕದ್ದೊಯ್ದ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ನಿವಾಸಿ, ಮೂವತ್ತೆರಡು ವರ್ಷದ ಸಂಜಯ್ ಕುಮಾರ್ ಬಂಧಿತ ಆರೋಪಿ. ಇವರು ಪ್ರಸ್ತುತ ಉಳಿಯಾರಗೋಳಿ ಭಾರತ್ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ.
ಮನೆಯವರು ವಿದೇಶದಲ್ಲಿರುವುದನ್ನು ಖಾತ್ರಿಪಡಿಸಿಕೊಂಡು ಒಳನುಗ್ಗಿದ ಖದೀಮ ಬೆಲೆಬಾಳುವ ವಾಚ್ ಮತ್ತು ಹಣವನ್ನು ಎಗರಿಸಿದ್ದ. ಈತನನ್ನು ಇದೀಗ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆತನ ಬಳಿಯಿದ್ದ ನಾಲ್ಕು ವಾಚ್, ಬೈಕ್ ನ್ನು ವಶಪಡಿಸಿಕೊಳ್ಳಲಾಗಿದೆ.

