ಹದಿನೈದು ದಿನಗಳ ಹಿಂದೆ ನಡೆದ ಪಹಲ್ಗಾಮ್ ದಾಳಿಗೆ ಭಾರತ ದಿಟ್ಟ ಪ್ರತ್ಯುತ್ತರ ಆರಂಭಿಸಿದೆ. ಪಾಕಿಸ್ತಾನಕ್ಕೆ ಮೇಲಿಂದ ಮೇಲೆ ಆರ್ಥಿಕ, ರಾಜತಾಂತ್ರಿಕ ಹೊಡೆತ ನೀಡಿದ ಬೆನ್ನಲ್ಲೇ ಈಗ ‘ಆಪರೇಷನ್ ಸಿಂಧೂರ’ ಹೆಸರಲ್ಲಿ ಏರ್ ಸ್ಟ್ರೈಕ್ ನಡೆಸಿದೆ.
ಪಾಕ್ ಆಕ್ರಮಿತ ಕಾಶ್ಮೀರದ 9 ಉಗ್ರರ ಕ್ಯಾಂಪ್ ಗಳ ಮೇಲೆ ಮಧ್ಯ ರಾತ್ರಿ ನಡೆಸಿದ 28 ನಿಮಿಷಗಳ ವೈಮಾನಿಕ ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ.
ಇಂದು ದೇಶಾದ್ಯಂತ ಮಾಕ್ ಡ್ರಿಲ್ ನಡೆಯುತ್ತಿದ್ದು, ಅದರ ಮುನ್ನವೇ ಏರ್ ಸ್ಟ್ರೈಕ್ ನಡೆಸಲಾಗಿದೆ.

