ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಮೇಲೆ ಕಾಮುಕನೋರ್ವ ಅತ್ಯಾಚಾರವೆಸಗಿದ ಹಿನ್ನೆಲೆ ಆಕೆ ಗರ್ಭವತಿಯಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಶಿರ್ಲಾಲು ಗ್ರಾಮದ ಇಪ್ಪತ್ತೆಂಟು ವರ್ಷದ ಸನತ್ ಬಂಧಿತ ಆರೋಪಿ. ಆರೋಪಿ ಸನತ್ ಬಾಲಕಿಯ ತಂದೆಯ ಕಾರಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಬಾಲಕಿಯ ಜೊತೆ ಸಲುಗೆಯಲ್ಲಿ ವರ್ತಿಸುತ್ತಿದ್ದ.
ಬಾಲಕಿಯ ಬರ್ತ್ ಡೇ ದಿನ ಆತನ ಮನೆಗೆ ಬಂದಾಗ ಅದೇ ದಿನ ರಾತ್ರಿ ಅಲ್ಲೇ ಉಳಿದುಕೊಂಡಿದ್ದ. ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.


